ಮುಂಬೈ, ಮೇ 16 (DaijiworldNews/DB): ಇಹಲೋಕ ತ್ಯಜಿಸಿದ ಅಣ್ಣನ ಮಕ್ಕಳ ಉತ್ತಮ ಭವಿಷ್ಯ ಮತ್ತು ಆತನ ಪತ್ನಿಗೆ ಬಾಳು ಕೊಡುವ ಸಲುವಾಗಿ ಅಣ್ಣನ ಪತ್ನಿಯನ್ನೇ ಕೈ ಹಿಡಿದು ಇಲ್ಲೊಬ್ಬ ವ್ಯಕ್ತಿ ಮಾದರಿಯಾಗಿದ್ದಾರೆ.
ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಹರಿದಾಸ್ ದಮದರ್ ಅವರೇ ವಿಧವೆ ಅತ್ತಿಗೆಯನ್ನು ಕೈ ಹಿಡಿದಾತ. ಈತನ ಅಣ್ಣ ಅಕಾಲಿಕ ಮರಣವನ್ನಪ್ಪಿದ ಕಾರಣ ಅಣ್ಣನ ಮಕ್ಕಳು ಮತ್ತು ಪತ್ನಿ ಕಂಗಾಲಾಗಿದ್ದರು. ಇದರಿಂದ ಸಂಬಂಧಿಕರು ಅತ್ತಿಗೆಯನ್ನು ಮದುವೆಯಾಗುವಂತೆ ಹರಿದಾಸ್ ಅವರಲ್ಲಿ ಮನವಿ ಮಾಡಿದ್ದಾರೆ. ಹೀಗಾಗಿ ಯೋಚಿಸಿದ ಹರಿದಾಸ್ ಸಮಾಜಕ್ಕೆ ಹೆದರದೆ ಅತ್ತಿಗೆಯನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾನೆ. ಅದರಂತೆ ಅತ್ತಿಗೆಯಿಂದ ಒಪ್ಪಿಗೆ ಸಿಕ್ಕ ಬಳಿಕ ಇಬ್ಬರೂ ಸಪ್ತಪದಿ ತುಳಿದಿದ್ದಾರೆ. ಆ ಮೂಲಕ ಅತ್ತಿಗೆಗೆ ಹೊಸ ಬಾಳು ಕಲ್ಪಿಸಿದ್ದಾರೆ.
ಸದ್ಯ ಈ ಮದುವೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಮೃತ ವ್ಯಕ್ತಿಯ ಕಿರಿಯ ಸಹೋದರನ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.