ನವದೆಹಲಿ, ಮೇ 15 (DaijiworldNews/SM): ರಾಷ್ಟ್ರೀಯತೆ ಮತ್ತು ಪ್ರಜಾಪ್ರಭುತ್ವ ರಕ್ಷಣೆಗೆ ಸಮಾನ ಮನಸ್ಕರೊಂದಿಗೆ ಚೈತ್ರಿ ಮಾಡಿಕೊಳ್ಳುವ ಅಗತ್ಯವಿದೆ ಎಂದು ಕಾಂಗ್ರೆಸ್ ಹೇಳಿದೆ. ಸಮಾನ ಮನಸ್ಕ ಪಕ್ಷಗಳೊಂದಿಗೆ ಸಂವಾದ-ಸಂಪರ್ಕ ಸ್ಥಾಪಿಸಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಘೋಷಿಸಿದೆ.
ಕಾಂಗ್ರೆಸ್ ಭಾರತೀಯ ರಾಷ್ಟ್ರೀಯತೆ ಪಕ್ಷದ ಪ್ರಮುಖ ಪಾತ್ರವಾಗಿದೆ ಎಂದು ಪ್ರತಿಪಾದಿಸಿದೆ. ಆದರೆ ಇದಕ್ಕೆ ವಿರುದ್ಧವಾಗಿ, ಬಿಜೆಪಿಯ "ಹುಸಿ-ರಾಷ್ಟ್ರೀಯತೆ" ಅಧಿಕಾರದ ಹಸಿವಿನ ಮೇಲೆ ಕೇಂದ್ರೀಕೃತವಾಗಿದೆ. ಈ ವ್ಯತ್ಯಾಸವನ್ನು ಜನರ ಮುಂದೆ ತರುವುದು ಪ್ರತಿಯೊಬ್ಬ ಕಾಂಗ್ರೆಸ್ ನಾಯಕರ ಮತ್ತು ಕಾರ್ಯಕರ್ತರ ಕರ್ತವ್ಯವಾಗಿದೆ ಎಂದು ಘೋಷಣೆಯಲ್ಲಿ ತಿಳಿಸಿದೆ.