ಕೊಯಿಕ್ಕೋಡ್, ಮೇ 15 (DaijiworldNews/DB): ರೈಲು ಢಿಕ್ಕಿಯಾಗಿ ನದಿಗೆ ಎಸೆಯಲ್ಪಟ್ಟು ಯುವತಿಯೋರ್ವಳು ದಾರುಣವಾಗಿ ಮೃತಪಟ್ಟ ಘಟನೆ ಕೇರಳದ ಕೊಯಿಕ್ಕೋಡ್ನಲ್ಲಿ ಶನಿವಾರ ನಡೆದಿದೆ.
ಮೃತ ಯುವತಿಯನ್ನು ಕರುವಂತುರುತಿ ನಿವಾಸಿ ನಫಾತ್ ಫತಾಹ್ (16) ಎಂದು ಗುರುತಿಸಲಾಗಿದೆ. ಈಕೆ ತನ್ನ ಸ್ನೇಹಿತನೊಂದಿಗೆ ರೈಲು ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೊಯಮತ್ತೂರು-ಮಂಗಳೂರು ಪ್ಯಾಸೆಂಜರ್ ರೈಲು ಆಕಸ್ಮಿಕವಾಗಿ ಢಿಕ್ಕಿ ಹೊಡದಿದೆ. ಢಿಕ್ಕಿಯ ರಭಸಕ್ಕೆ ಆಕೆ ಪಕ್ಕದಲ್ಲೇ ಇದ್ದ ನದಿಗೆ ಎಸೆಯಲ್ಪಟ್ಟಿದ್ದಾಳೆ. ನದಿಗೆ ಬಿದ್ದ ಆಕೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಬೇಪೋರ್ನಲ್ಲಿ ಮೃತದೇಹ ಪತ್ತೆಯಾಗಿದೆ. ಆಕೆಯ ಸ್ನೇಹಿತನಿಗೆ ಕೂಡಾ ಗಾಯಗಳಾಗಿದ್ದು, ಆತನನ್ನು ಕೊಯಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.