ಪಾಟ್ನಾ, ಮೇ 15 (DaijiworldNews/DB): ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಢಿಕ್ಕಿ ಹೊಡೆದ ಪರಿಣಾಮ ನದಿಗೆ ಉರುಳಿ ಬಿದ್ದು, ಐವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಿಹಾರದಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
ರಂಜಿತ್ ಕುಮಾರ್, ಅಭಯ್ ಕುಮಾರ್, ಅಕ್ಷಯ್ ಕುಮಾರ್, ಶುಭಂ ಕುಮಾರ್, ಬಬಲುಕುಮಾರ್ ಮೃತಪಟ್ಟವರು. ಗಂಜನ್ಕುಮಾರ್ ಮತ್ತು ಮುಕೇಶ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ವಾರಣಾಸಿಯ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿಕೊಡಲಾಗಿದೆ.
ಕಾರಿನಲ್ಲಿದ್ದವರು ಜಾರ್ಖಂಡ್ನ ಪಲಮು ಮೂಲದವರು. ಮದುವೆ ಪಾರ್ಟಿ ಮುಗಿಸಿಕೊಂಡು ಟೋಲ್ ಪಂಚಾಯತ್ನ ಬಾಘಿ ಗ್ರಾಮದಿಂದ ಪಲಮು ಜಿಲ್ಲೆಯ ಛತ್ತರ್ಪುರಕ್ಕೆ ವಾಪಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಸೇತುವೆಗೆ ಡಿಕ್ಕಿ ಹೊಡೆಯಿತು. ಪರಿಣಾಮ ಅಲ್ಲೇ ಇದ್ದ ನದಿಗೆ ಉರುಳಿ ಬಿದ್ದಿದೆ.
ಸ್ಥಳೀಯ ಪೊಲೀಸರು ಘಟನಾ ಸ್ಥಳಖ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ.