ಶ್ರೀನಗರ, ಮೇ 15 (DaijiworldNews/DB): ಭಯೋತ್ಪಾದಕರು ಮತ್ತು ಪೊಲೀಸ್, ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ನಾಗರಿಕ ಸಾವನ್ನಪ್ಪಿರುವಘಟನೆದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತಪಟ್ಟ ನಾಗರಿಕನನ್ನು ಶಾಹಿದ್ ಅಹ್ಮದ್ ಎಂದು ಗುರುತಿಸಲಾಗಿದೆ. ಇಲ್ಲಿನ ತುರ್ಕವಾಗಮ್ನಲ್ಲಿ ಭಯೋತ್ಪಾದಕರು ಮತ್ತು ಸಿಆರ್ಪಿಎಫ್ ಮತ್ತು ಪೊಲೀಸ್ ತಂಡಗಳ ನಡುವೆ ನಡೆದ ಎನ್ಕೌಂಟರ್ನಲ್ಲಿ ನಾಗರಿಕ ಗಾಯಗೊಂಡಿದ್ದ. ಆತನನ್ನು ಶ್ರೀನಗರದ ಶ್ರೀ ಮಹಾರಾಜ ಹರಿ ಸಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಲಿಟ್ಟರ್, ಪುಲ್ವಾಮಾವನ್ನು ತುರ್ಕವಾಂಗಮ್, ಶೋಪಿಯಾನ್ಗೆ ಸಂಪರ್ಕಿಸುವ ಸೇತುವೆಯ ಬಳಿ ಪುಲ್ವಾಮಾದ ಸಿಆರ್ಪಿಎಫ್ ಜಂಟಿ ಗಸ್ತು ನಡೆಯುತ್ತಿತ್ತು. ಈ ವೇಳೆ ತಂಡದ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಇದರಿಂದ ಸಿಆರ್ಪಿಎಫ್ ತಂಡ ಪ್ರತಿದಾಳಿ ನಡೆಸಿತ್ತು.