ರಾಂಚಿ, ಮೇ 15 (DaijiworldNews/DB): ರಸ್ತೆ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗೆ ಬಳಸುತ್ತಿದ್ದ 10 ವಾಹನಗಳಿಗೆ ಮಾವೋವಾದಿಗಳು ಬೆಂಕಿ ಹಚ್ಚಿದ ಘಟನೆ ಜಾರ್ಖಂಡ್ನ ಲತೇಹರ್ ಜಿಲ್ಲೆಯಲ್ಲಿ ನಡೆದಿದೆ.
ಬೆಂಕಿ ಹಚ್ಚಿದ ವಾಹನಗಳ ಪೈಕಿ ಎಂಟು ವಾಹನಗಳು ನಿರ್ಮಾಣ ಕಂಪೆನಿಯೊಂದಕ್ಕೆ ಸೇರಿದ್ದವಾಗಿದ್ದು, ಇದರಲ್ಲಿ ಹಿಟಾಚಿ ಮತ್ತು ಟ್ಯಾಂಕರ್ಗಳು ಸೇರಿವೆ. ಈ ಎಂಟು ವಾಹನಗಳಿಗೆ ಮಹುದನರ್ ಠಾಣೆ ವ್ಯಾಪ್ತಿಯ ಬಸ್ಕರ್ಚಾ ಗ್ರಾಮದಲ್ಲಿ ಬೆಂಕಿ ಹಚ್ಚಿದ್ದಾರೆ. ಇನ್ನೆರಡು ವಾಹನಗಳಿಗೆ ಪೊಟ್ಮಾದಿಹ್ನಲ್ಲಿ ಬೆಂಕಿ ಹಚ್ಚಲಾಗಿದ್ದು, ಘಟನೆ ಶನಿವಾರ ರಾತ್ರಿ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಬೆಂಕಿ ಹಚ್ಚಿದ ಬಳಿಕ ಕೃತ್ಯದ ಹೊಣೆ ಹೊತ್ತಿರುವ ಮಾವೋವಾದಿಗಳು ಈ ಸಂಬಂಧ ಕರಪತ್ರವನ್ನೂ ಅಂಟಿಸಿದ್ದಾರೆ. ಸುಲಿಗೆ ಮಾಡಿ ಬೆಂಕಿ ಹಚ್ಚಲಾಗಿದೆ ಎಂದು ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ರಾಜೇಶ್ ಕುಜುರ್ ತಿಳಿಸಿದ್ದಾರೆ. ಮಾವೋವಾದಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.