ಬೆಂಗಳೂರು, ಮೇ 14 (DaijiworldNews/DB): ಬಿಬಿಎಂಪಿ ಕಸದ ಲಾರಿಯು ಮತ್ತೊಂದು ಜೀವವನ್ನು ಬಲಿಪಡೆದುಕೊಂಡಿದೆ. ಕಸದ ಲಾರಿ ಹರಿದು ಡೆಲಿವರಿ ಬಾಯ್ ಒಬ್ಬ ಮೃತಪಟ್ಟಿದ್ದಾನೆ.
ಬಿಬಿಎಂಪಿ ಕಸದ ಲಾರಿಗಳು ದಿನೇ ದಿನೇ ಯಮ ಸ್ವರೂಪಿಯಾಗುತ್ತಿದ್ದು, ಈಗಾಗಲೇ ಮೂವರನ್ನು ಬಲಿ ತೆಗೆದುಕೊಂಡಿದೆ. ಇದೀಗ ಶನಿವಾರ ಯಾದಗಿರಿ ಜಿಲ್ಲೆ ಸುರಪುರ ಮೂಲದ 25 ವರ್ಷದ ಯುವಕ ದೇವಣ್ಣ ಲಾರಿಯಡಿಗೆ ಸಿಕ್ಕಿ ಮೃತಪಟ್ಟಿದ್ದಾರೆ.
ಧಣಿಸಂದ್ರ ರೈಲ್ವೆ ಮೇಲ್ಸೇತುವೆ ಬಳಿ ಘಟನೆ ನಡೆದಿದೆ. ಲಾರಿ ಚಾಲಕ ದಿನೇಶ್ ನಾಯ್ಕ್ (40)ನನ್ನು ಬಂಧಿಸಲಾಗಿದೆ ಎಂದುವರದಿಯಾಗಿದೆ.