ತ್ರಿಪುರಾ, ಮೇ 14 (DaijiworldNews/DB): ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಂಸದ ಮಾಣಿಕ್ ಸಹಾ ಅವರನ್ನು ಶನಿವಾರ ಘೋಷಿಸಲಾಯಿತು.
ಮುಖ್ಯಮಂತ್ರಿಯಾಗಿದ್ದ ಬಿಪ್ಲಬ್ ಕುಮಾರ್ ದೇಬ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸಿಎಂ ಸ್ಥಾನಕ್ಕೆ ಮಾಣಿಕ್ ಸಹಾ ಹೊಸ ಸಾರಥಿಯಾದರು.
ಈ ಆಯ್ಕೆಗಾಗಿ ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಕೇಂದ್ರ ಸಚಿವ ಭೂಪೇಂದರ್ ಯಾದವ್ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಮುಂದಾಳತ್ವದಲ್ಲಿ ಈ ಸಭೆ ನಡೆದಿತ್ತು.