ದಾವಣಗೆರೆ, ಮೇ 14 (DaijiworldNews/DB): ನಾಯಕರಿಲ್ಲದ ಕಾಂಗ್ರೆಸ್ ಪಕ್ಷ ಅನಾಥವಾಗಿದೆ. ಜಾಮೀನಿನ ಮೇಲೆ ಹೊರ ಬಂದವರೇ ಆ ಪಕ್ಷದಲ್ಲಿರುವುದು ಎಂದು ಸಚಿವ ಸುನೀಲ್ ಕುಮಾರ್ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ನಾಯಕರಿಲ್ಲದೆ ಅನಾಥವಾಗಿರುವ ಆ ಪಕ್ಷವನ್ನು ಮುನ್ನಡೆಸಲು ಸದ್ಯ ಯಾರೂ ಇಲ್ಲದಾಗಿದೆ. ಕಾರ್ಯಕರ್ತರಿಗೂ ಇದೇ ಸ್ಥಿತಿ ಇದೆ. ಜನ ಆ ಪಕ್ಷದ ಮೇಲೆ ಭರವಸೆಯನ್ನೇ ಕಳೆದುಕೊಂಡಿದ್ದಾರೆ ಎಂದರು.ಭ್ರಷ್ಟಾಚಾರದಲ್ಲಿ ತುಳುಕಾಡುತ್ತಿರುವ ಕಾಂಗ್ರೆಸ್ನಲ್ಲಿ ರಾಜ್ಯಾಧ್ಯಕ್ಷರಿಂದ ರಾಷ್ಟ್ರಾಧ್ಯಕ್ಷರವರೆಗೂ ಎಲ್ಲರೂ ಭ್ರಷ್ಟರೇ ಆಗಿದ್ದಾರೆ. ಜಾಮೀನಿನ ಮೇಲೆ ಹೊರ ಬಂದವರು ಅವರು ಎಂದು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಪಕ್ಷದ ಮೇಲೆ ರಾಜ್ಯದ ಜನತೆ ಭರವಸೆ ಇಟ್ಟಿದ್ದಾರೆ ಎಂದವರು ಇದೇ ವೇಳೆ ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಸಿಎಂ ವಿವೇಚನೆಗೆ ಬಿಟ್ಟದ್ದು.ರಾಜ್ಯದ ಹಿತದೃಷ್ಟಿಯಿಂದ ಅವರು ಉತ್ತಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಭ್ರಷ್ಟಾಚಾರದಲ್ಲಿ ತುಳುಕಾಡುತ್ತಿರುವ ಕಾಂಗ್ರೆಸ್ನಲ್ಲಿ ರಾಜ್ಯಾಧ್ಯಕ್ಷರಿಂದ ರಾಷ್ಟ್ರಾಧ್ಯಕ್ಷರವರೆಗೂ ಎಲ್ಲರೂ ಭ್ರಷ್ಟರೇ ಆಗಿದ್ದಾರೆ. ಜಾಮೀನಿನ ಮೇಲೆ ಹೊರ ಬಂದವರು ಅವರು ಎಂದು ಟೀಕಿಸಿದರು.