ಮುಂಬೈ, ಮೇ 14 (DaijiworldNews/DB): ಹಿಂದಿ ಮಾತನಾಡುವವರ ಸಂಖ್ಯೆ ಭಾರತದಲ್ಲಿ ಹೆಚ್ಚಿದೆ. ಹೀಗಾಗಿ ಅದನ್ನು ರಾಷ್ಟ್ರ ಭಾಷೆಯನ್ನಾಗಿ ಸ್ವೀಕಾರ ಮಾಡಬಹುದು ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.
ಹಿಂದಿ ಕಲಿತವರು ಪಾನಿಪುರಿ ಮಾರುತ್ತಿದ್ದಾರೆ ಎಂಬ ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಕೆ ಪೊನ್ಮುಡಿ ಅವರ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ರಾವತ್, ಹಿಂದಿಭಾಷೆಗೆ ತಾವು ಮತ್ತುತಮ್ಮ ಪಕ್ಷ ಎಂದಿಗೂ ಗೌರವ ನೀಡುತ್ತದೆ. ಅವಕಾಶ ಸಿಕ್ಕಾಗೆಲ್ಲ ನಾನು ಹಿಂದಿಯಲ್ಲೇ ವ್ಯವಹರಿಸುತ್ತೇನೆ. ಇಡೀ ದೇಶವೇ ಒಪ್ಪಿಕೊಳ್ಳಬಹುದಾದ ಭಾಷೆ ಹಿಂದಿ ಎಂದರು.
ಯಾವುದೇ ಭಾಷೆಗೆ ನಾನು ಅವಮಾನ ಮಾಡುವುದಿಲ್ಲ. ಒಂದು ದೇಶ, ಒಂದು ಸಂವಿಧಾನ, ಒಂದು ಲಾಂಛನ ಇರುವಂತೆ ದೇಶಕ್ಕೆ ರಾಷ್ಟ್ರಭಾಷೆ ಎಂಬುದಾಗಿ ಒಂದು ಭಾಷೆ ಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು ಎಂದವರು ಈ ವೇಳೆ ಸ್ಮರಿಸಿದರು.