ಜಮ್ಮು, ಮೇ 14 (DaijiworldNews/HR): ಜಮ್ಮುವಿನ ಆರ್.ಎಸ್.ಪುರ ವಲಯದ ಅಂತರರಾಷ್ಟ್ರೀಯ ಗಡಿ ಬಳಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಪಾಕಿಸ್ತಾನದ ಡ್ರೋನ್ವೊಂದನ್ನು ಗುರುತಿಸಿದ್ದು, ಗುಂಡಿನ ದಾಳಿ ನಡೆಸಿ ಹಿಂದಕ್ಕಟ್ಟಿದೆ.
ಸಾಂದರ್ಭಿಕ ಚಿತ್ರ
ಇಂದು ಮುಂಜಾನೆ 4.45ರ ಸುಮಾರಿನಲ್ಲಿ ಪಾಕ್ ಕಡೆಯಿಂದ ಡ್ರೋನ್ವೊಂದು ಭಾರತದತ್ತ ಬರುತ್ತಿದ್ದದ್ದನ್ನು ಸೈನಿಕರು ಪತ್ತೆ ಮಾಡಿ ನ್ಬಳಿಕ ಡ್ರೋನ್ನತ್ತ ಏಳರಿಂದ ಎಂಟು ಸುತ್ತು ಗುಂಡುಗಳನ್ನು ಹಾರಿಸಿದ್ದು, ಆಗ ಡ್ರೋನ್ ಪಾಕಿಸ್ತಾನದ ಕಡೆಗೆ ಹಿಂತಿರುಗಿದೆ ಎಂದು ಬಿಎಸ್ಎಫ್ ತಿಳಿಸಿದೆ.
ಇನ್ನು ಮೇ 7 ರಂದು ಕೂಡ, ಪಾಕಿಸ್ತಾನದ ಕಡೆಯಿಂದ ಭಾರತದ ಕಡೆಗೆ ಬರುತ್ತಿದ್ದ ಡ್ರೋನ್ವೊಂದನ್ನು ಬಿಎಸ್ಎಫ್ ಪಡೆ ಗುಂಡು ಹೊಡೆದು ಹಿಮ್ಮೆಟ್ಟಿಸಿತ್ತು.