ಉದಯಪುರ, ಮೇ 13 (DaijiworldNews/HR): ಪಕ್ಷದಲ್ಲಿ ಕೆಲವು ಸಾಂಸ್ಥಿಕ ಸುಧಾರಣೆಗಳ ಅಗತ್ಯವಿದೆ ಎಂದು ಪಕ್ಷದಲ್ಲಿ ಆತ್ಮಾವಲೋಕನದ ಪ್ರಾಮುಖ್ಯತೆಯನ್ನು ಸೋನಿಯಾ ಗಾಂಧಿ ಒತ್ತಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, 'ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಹೋದ್ಯೋಗಿಗಳು 'ಗರಿಷ್ಠ ಆಡಳಿತ, ಕನಿಷ್ಠ ಸರ್ಕಾರ' ಎಂಬ ಅವರ ಘೋಷಣೆಯಿಂದ ನಿಜವಾಗಿಯೂ ಏನನ್ನು ಅರ್ಥೈಸುತ್ತಿದ್ದಾರೆ ಎಂಬುದು ನೋವಿನಿಂದ ಸ್ಪಷ್ಟವಾಗಿದೆ. ಇದರರ್ಥ ದೇಶವನ್ನು ಶಾಶ್ವತ ಧ್ರುವೀಕರಣದ ಸ್ಥಿತಿಯಲ್ಲಿ ಇರಿಸುವುದು, ಜನರನ್ನು ನಿರಂತರವಾಗಿ ಭಯ ಮತ್ತು ಅಭದ್ರತೆಯಲ್ಲಿ ಬದುಕುವಂತೆ ಮಾಡುವುದೇ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಬಿಜೆಪಿ, ಆರೆಸ್ಸೆಸ್ ಮತ್ತು ಅದರ ಅಂಗಸಂಸ್ಥೆಗಳ ನೀತಿಗಳ ಪರಿಣಾಮವಾಗಿ ದೇಶವು ಎದುರಿಸುತ್ತಿರುವ ಹಲವಾರು ಸವಾಲುಗಳ ಕುರಿತಂತೆ ಚರ್ಚಿಸಲು ಇದು ನಮಗೆ ಅವಕಾಶವನ್ನು ನೀಡುತ್ತದೆ. ಇದು ನಮ್ಮ ಮುಂದಿರುವ ಅನೇಕ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲು ಒಂದು ಸುಸಂದರ್ಭವಾಗಿದ್ದು, ರಾಷ್ಟ್ರೀಯ ವಿಷಯಗಳ ಬಗ್ಗೆ 'ಚಿಂತನೆ' ಮತ್ತು ನಮ್ಮ ಪಕ್ಷದ ಸಂಘಟನೆಯ ಬಗ್ಗೆ ಅರ್ಥಪೂರ್ಣ 'ಆತ್ಮಚಿಂತನೆ' ಎರಡೂ ಮಾಡಬಹುದು ಎಂದು ಹೇಳಿದ್ದಾರೆ.