ಜಮ್ಮು ಕಾಶ್ಮೀರ, ಮೇ 13 (DaijiworldNews/HR): ಗುರುವಾರದಂದು ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಹತ್ಯೆ ಮಾಡಿದ್ದ ಭಯೋತ್ಪಾದಕರು ಇಂದು ಕಣಿವೆಯ ಪುಲ್ವಾಮಾದ ಗುಡುರಾ ಪ್ರದೇಶದಲ್ಲಿ ಪೊಲೀಸ್ ಪೇದೆ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸ್ ಪೇದೆ ರಿಯಾಜ್ ಅಹ್ಮದ್ ಥೋಕರ್ ಗುಡೂರ ಅವರ ಮನೆಯಲ್ಲಿದ್ದು, ಇದೇ ವೇಳೆ ಉಗ್ರರು ಗುರಿಯಿಟ್ಟು ಗುಂಡಿನ ದಾಳಿ ನಡೆಸಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಿಯಾಜ್ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ಹತ್ಯೆಗಳನ್ನು ಮಾಡುತ್ತಿದ್ದು, ನಿನ್ನೆ ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಹತ್ಯೆಯಾಗಿದ್ದರೆ, ಇಂದು ಪೊಲೀಸ್ ಪೇದೆ ರಿಯಾಜ್ ಅಹ್ಮದ್ ಅವರನ್ನು ಟಾರ್ಗೆಟ್ ಮಾಡಲಾಗಿದೆ.