ಮುಂಬೈ, ಮೇ 13 (DaijiworldNews/HR): ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಆಪ್ತ ಛೋಟಾ ಶಕೀಲ್ ಪರ ಅಕ್ರಮ ಕೆಲಸ ಮಾಡುತ್ತಿದ್ದ ಇಬ್ಬರನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮುಂಬೈಯಲ್ಲಿ ಬಂಧಿಸಿದ್ದು, ಇಂದು ಎನ್ಐಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಬಂಧಿತರನ್ನು ಆರಿಫ್ ಅಬೂಬಕರ್ ಶೇಖ್ (59) ಹಾಗೂ ಶಬ್ಬೀರ್ ಅಬೂಬಕರ್ ಶೇಖ್ (51) ಎಂದು ಗುರುತಿಸಲಾಗಿದೆ.
ಮುಂಬೈಯ ಪಶ್ಚಿಮ ಉಪನಗರ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಇಬ್ಬರೂ ಬಂಧಿತರು ತೊಡಗಿಕೊಂಡಿದ್ದು, ದಾವೂದ್ ಸಹಚರರ ಭಯೋತ್ಪಾದನೆ ಚಟುವಟಿಕೆಗಳಿಗೆ ಹಣಕಾಸು ನೆರವು ಒದಗಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮುಂಬೈಯ ಅನೇಕ ಕಡೆಗಳಲ್ಲಿ ದಾವೂದ್ ಇಬ್ರಾಹಿಂ ಸಹಚರರ ಮತ್ತು ಹವಾಲಾ ದಂದೆ ನಡೆಸುವವರ ವಿರುದ್ದ ಇತ್ತಿಚೇಗೆ ಎನ್ಐಎ ದಾಳಿ ನಡೆಸಿತ್ತು.