ಬೆಂಗಳೂರು, ಮೇ 13 (DaijiworldNews/MS): ಅಂತರ್ಜಾಲ ಆಧಾರಿತ ಭಾಷಾಂತರ ಅಪ್ಲಿಕೇಶನ್ ಆದ ಗೂಗಲ್ ಟ್ರಾನ್ಸ್ ಲೇಶ ನ್ ಗೆ ಹೊಸದಾಗಿ ಕೊಂಕಣಿ ಯನ್ನು ಸೇರಿಸಿಕೊಳ್ಳಲಾಗಿದೆ ಎಂದು ಗೂಗಲ್ ಸಂಸ್ಥೆ ಪ್ರಕಟನೆ ನೀಡಿದೆ.
ಈಗಾಗಲೇ 100ಕ್ಕೂ ಅಧಿಕ ಭಾಷೆಗಳು ಗೂಗಲ್ ಟ್ರಾನ್ಸ್ಲೇಟ್ನಲ್ಲಿದ್ದು, ಭಾರತೀಯ ಭಾಷೆಗಳಿಗೂ ಗೂಗಲ್ ಮಾನ್ಯತೆ ನೀಡಿದೆ.ಇದೀಗ ಗೂಗಲ್ ಟ್ರಾನ್ಸ್ಲೇಟ್ನಲ್ಲಿ ಹೊಸದಾಗಿ ಭಾರತೀಯ ಭಾಷೆಗಳಾದ ಅಸ್ಸಾಮಿ, ಭೋಜ್ಪುರಿ, ಡೋಗ್ರ, ಕೊಂಕಣಿ, ಮೈಥಿಲಿ, ಮಣಿಪುರಿ ಮತ್ತು ಮಿಜೋ ಭಾಷೆಗಳು ಸೇರ್ಪಡೆಗೊಂಡಿದೆ.
ಗೂಗಲ್ ಟ್ರಾನ್ಸ್ಲೇಟ್ನಲ್ಲಿ ಕೊಂಕಣಿ ಸೇರ್ಪಡೆ ಮಾಡಿರುವ ಕುರಿತು ಕೊಂಕಣಿ ಭಾಷಾ ಪ್ರೇಮಿಗಳು ಗೂಗಲ್ನ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಕೊಂಕಣಿಯನ್ನು ಗೋವಾ, ಕರ್ನಾಟಕ ಕರಾವಳಿಯಲ್ಲಿ ಮತ್ತು ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ವ್ಯಾಪಕವಾಗಿ ಮಾತನಾಡುತ್ತಾರೆ.