ಲಕ್ನೋ, ಮೇ 12 (DaijiworldNews/HR): ತಾಜ್ಮಹಲ್ನಲ್ಲಿನ 22 ಮುಚ್ಚಿದ ಬಾಗಿಲುಗಳನ್ನು ತೆರೆಯುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠವು ಗುರುವಾರ ತಿರಸ್ಕರಿಸಿದೆ.
ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠದಲ್ಲಿ, ಆಗ್ರಾದ ತಾಜ್ಮಹಲ್ನಲ್ಲಿ ಹಿಂದೂ ವಿಗ್ರಹಗಳು ಮತ್ತು ಶಾಸನಗಳನ್ನು ಮರೆಮಾಡಲಾಗಿದೆಯೇ ಎಂದು ಕಂಡುಹಿಡಿಯಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಕೊಠಡಿಗಳನ್ನು ತೆರೆಯುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ಇನ್ನು ರಾಜ್ಸಮಂದ್ನ ಬಿಜೆಪಿ ಸಂಸದೆ ಮತ್ತು ಜೈಪುರ ರಾಜಮನೆತನದ ದಿಯಾ ಕುಮಾರಿ ಅವರು ತಾಜ್ಮಹಲ್ ನಿರ್ಮಿಸಿದ ಭೂಮಿ ಹಿಂದಿನ ಜೈಪುರ ರಾಜಮನೆತನದ ಒಡೆತನದಲ್ಲಿದೆ ಎಂದು ಬುಧವಾರ ಹೇಳಿದ್ದರು.