ನವದೆಹಲಿ, ಮೇ 12 (DaijiworldNews/HR): ವಿದೇಶಕ್ಕೆ ಪ್ರಯಾಣಿಸುವವರು ಈಗ ಕೊರೊನಾ ಬೂಸ್ಟರ್ ಡೋಸ್ಗಳನ್ನ ತೆಗೆದುಕೊಳ್ಳಲು ಅರ್ಹರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಭಾರತೀಯ ನಾಗರಿಕರು ಮತ್ತು ವಿದೇಶಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳು ಈಗ ಗಮ್ಯಸ್ಥಾನದ ದೇಶದ ಮಾರ್ಗಸೂಚಿಗಳ ಪ್ರಕಾರ ಮುನ್ನೆಚ್ಚರಿಕೆಯ ಡೋಸ್ ತೆಗೆದುಕೊಳ್ಳಬಹುದು ಎಂದಿದ್ದಾರೆ.
ಇನ್ನು ವಿದೇಶಕ್ಕೆ ಪ್ರಯಾಣಿಸಲು ಬಯಸುವ ಜನರು ಕೊರೊನಾ ಲಸಿಕೆಯ ಎರಡನೇ ಮತ್ತು ಬೂಸ್ಟರ್ ಡೋಸ್ ನಡುವಿನ ಒಂಬತ್ತು ತಿಂಗಳ ಅಂತರವನ್ನು ಕಡಿಮೆ ಮಾಡಬಹುದು ಎಂದು ರೋಗನಿರೋಧಕತೆಯ ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡ ಬುಧವಾರ ಹೇಳಿದೆ.