ಬೆಂಗಳೂರು, ಮೇ 12 (DaijiworldNews/DB): ಟೊಮೆಟೋ ಜ್ವರಕ್ಕೂ ಕೊರೊನಾ ವೈರಸ್ಗೂ ಯಾವುದೇ ಸಂಬಂಧವಿಲ್ಲ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಟೊಮೆಟೊ ಜ್ವರ ಮತ್ತು ಕೋವಿಡ್ ಸೋಂಕು ಬೇರೆ ಬೇರೆ. ಇದು ಹೊಸದಾಗಿ ಪತ್ತೆಯಾಗಿರುವ ರೋಗವಕ್ಕ. ಐದು ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವಜ್ವರವಾಗಿದೆ. ಇದಕ್ಕೆ ಅನ್ಯ ಅರ್ಥ ಕಲ್ಪಿಸಿ ಕೊರೊನಾದಂತೆ ಇದೂ ಮಾರಕ ಎಂಬಂತೆ ಬಿಂಬಿಸುವುದು ಸರಿಯಲ್ಲ ಎಂದರು.
ಈಗಾಗಲೇ ಕೇರಳದಲ್ಲಿ ಈ ಜ್ವರ ಹೆಚ್ಚಿನ ಮಕ್ಕಳಲ್ಲಿ ಕಂಡು ಬಂದಿರುವುದರಿಂದ ಅಲ್ಲಿಂದ ರಾಜ್ಯಕ್ಕೆ ಆಗಮಿಸುವ ಜನರನ್ನು ತಪಾಸಣೆ ಮಾಡಲು ಎಲ್ಲಾ ಗಡಿ ಜಿಲ್ಲೆಗಳ ಜಿಲ್ಲಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರಯಾಣಿಕರ ಮೇಲೆ ನಿಗಾ ವಹಿಸಲು ಆದೇಶಿಸಲಾಗಿದೆ ಎಂದು ಅವರು ತಿಳಿಸಿದರು.