ಚೆನ್ನೈ, ಮೇ 12 (DaijiworldNews/HR): ಚೆನ್ನೈ ನಗರದ ಹೊರವಲಯದಲ್ಲಿರುವ ಸೆಲೈಯೂರ್ನ ಮಪ್ಪೆಡು ಎಂಬಲ್ಲಿ ಐದು ದಿನದ ಗಂಡು ಮಗುವನ್ನು ಸಾಗಿಸಲು ಪ್ರಯತ್ನಿಸಿ ಮಗುವಿನ ತಾಯಿ ಸೇರಿದಂತೆ ಇಬ್ಬರು ಮಹಿಳೆಯರನ್ನು ಚೆನ್ನೈ ಪೊಲೀಸರು ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ತಾಯಿ ನೈರ್ಮಲ್ಯ ಕಾರ್ಮಿಕನಾಗಿದ್ದು, ಆಕೆಯ ಪತಿ ದಿನಗೂಲಿ ಕಾರ್ಮಿಕರಾಗಿದ್ದರು. ಅವರಿಗೆ ಇನ್ನಿಬ್ಬರು ಮಕ್ಕಳಿದ್ದು ಬೆಳೆಸಲು ಅವರಿಗೆ ಕಷ್ಟವಾಗುತ್ತಿದೆ ಎಂದು ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.
ಇನ್ನು ತಾಯಿ ನವಜಾತ ಶಿಶುವನ್ನು ತನ್ನ ಸಹೋದ್ಯೋಗಿಗೆ ಮಾರಾಟ ಮಾಡಲು ನಿರ್ಧರಿಸಿದ್ದು, ಅವರಿಗೆ ಮದುವೆಯಾದ 10 ವರ್ಷಗಳಾದರೂ ಮಕ್ಕಳಿಲ್ಲದ ತನ್ನ ಸಹೋದರನಿಗಾಗಿ ಮಗುವನ್ನು ಖರೀದಿಸಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ.
ಮಗು ಕಾಣೆಯಾಗಿರುವುದನ್ನು ತಾಯಿಯ ಸಂಬಂಧಿಕರು ಗಮನಿಸಿದಾಗ ಮಾತ್ರ ಈ ಘಟನೆ ಬೆಳಕಿಗೆ ಬಂದಿದ್ದು, ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದು, ಅವರು ಈ ಬಗ್ಗೆ ತನಿಖೆ ನಡೆಸಿ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ.