ನವದೆಹಲಿ, ಮೇ 12 (DaijiworldNews/HR): ಇಂದು ಎರಡನೇ ಜಾಗತಿಕ ಕೊರೊನಾ ಸಮಾವೇಶ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಅವರ ಆಹ್ವಾನದ ಮೇರೆಗೆ ಸಮಾವೇಶದ ವರ್ಚುವಲ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಧಾನಿ ನರೇಂದ್ರ ಮೋದಿಯವರು ಕಳೆದ 2021 ರ ಸೆಪ್ಟೆಂಬರ್ 22 ರಂದು ನಡೆದಿದ್ದ ಮೊದಲ ಜಾಗತಿಕ ಕೋವಿಡ್ ಸಮಾವೇಶದಲ್ಲೂ ಪಾಲ್ಗೊಂಡಿದ್ದು, ಇದೀಗ ಎರಡನೇ ಜಾಗತಿಕ ಕೊರೊನಾ ಸಮಾವೇಶದಲ್ಲಿಯೂ ಪಾಲ್ಗೊಳ್ಳಲಿದ್ದಾರೆ.
ಈ ಕುರಿತು ವಿದೇಶಾಂಗ ಇಲಾಖೆ ಮಾಹಿತಿ ನೀಡಿದ್ದು, ಇಂದು ನಡೆಯುವ ಎರಡನೇ ಜಾಗತಿಕ ಕೋವಿಡ್ ಸಮಾವೇಶದಲ್ಲಿ ಕೊರೊನಾ ರೂಪಾಂತರಿಗಳಿಂದ ಎದುರಾಗಿರುವ ಹೊಸ ಸವಾಲುಗಳನ್ನು ಹೇಗೆ ಎದುರಿಸುವುದು ಹಾಗೂ ವಿಶ್ವ ಆರೋಗ್ಯ ರಕ್ಷಣೆಗೆ ಮಾಡಬೇಕಿರುವ ತುರ್ತು ಕೆಲಸಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದೆ.