ಶ್ರೀಕಾಕುಳಂ, ಮೇ 11 (DaijiworldNews/MS): ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಸುನ್ನಪಲ್ಲಿ ಸಮುದ್ರತೀರದ ಬಂದರು ಬಳಿ ಮಂಗಳವಾರ ಬೆಳಗ್ಗೆ ನಿಗೂಢ ಚಿನ್ನದ ಬಣ್ಣದ ರಥವೊಂದು ದಡ ಸೇರಿದೆ.
ಅಸಾನಿ ಚಂಡಮಾರುತದ ಪ್ರಭಾವದ ನಡುವೆ ದಡಕ್ಕೆ ತೇಲಿ ಬಂದಿದ್ದು ದಡದಲ್ಲಿದ್ದ ಜನರು ರಥವನ್ನು ನೀರಿನಿಂದ ಎಳೆದು ದಡಕ್ಕೆ ತಂದಿದ್ದಾರೆ.ಘಟನೆಯ ಕುರಿತು ಗುಪ್ತಚರ ಇಲಾಖೆಗೆ ಮಾಹಿತಿ ನೀಡಲಾಗಿದೆ. ಇದು ಬೇರೆ ದೇಶದಿಂದ ಬಂದಿರಬಹುದು, ಈ ಬಗ್ಗೆ ಉನ್ನತ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ ಎಂದು ಶ್ರೀಕಾಕುಳಂ ಜಿಲ್ಲೆಯ ನೌಪಾದಎಸ್ಐ ತಿಳಿಸಿದ್ದಾರೆ.
ಇಂದು ಮುಂಜಾನೆ, ಭಾರತೀಯ ಹವಾಮಾನ ಇಲಾಖೆ (IMD) ತೀವ್ರತರವಾದ ಪ್ರಭಲ ಚಂಡಮಾರುತ 'ಅಸಾನಿ'ದ ಆರ್ಭಟ ತಗ್ಗಿದ್ದು, ಗುರುವಾರ ಬೆಳಿಗ್ಗೆ ಇದು ಮತ್ತಷ್ಟು ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದೆ.
ಅಸನಿ ಚಂಡಮಾರುತವು ವಿಮಾನ ಕಾರ್ಯಾಚರಣೆಯನ್ನು ಅಡ್ಡಿಪಡಿಸುತ್ತಿದ್ದು, ಆಂಧ್ರದ ವಿಶಾಖಪಟ್ಟಣಂ ಮತ್ತು ತಮಿಳುನಾಡಿನ ಚೆನ್ನೈನಲ್ಲಿ ಬುಧವಾರ ಬೆಳಿಗ್ಗೆ ಎಲ್ಲಾ ಇಂಡಿಗೋ ವಿಮಾನಗಳನ್ನು ರದ್ದುಗೊಳಿಸಿದೆ.