ಬೆಂಗಳೂರು, ಮೇ 11 (DaijiworldNews/DB): ಯಾರನ್ನು ಬೇಕಾದರೂ ನಾನು ಭೇಟಿಯಾಗುತ್ತೇನೆ. ಅದಕ್ಕೆಲ್ಲಾ ಡಿ.ಕೆ. ಶಿವಕುಮಾರ್ ಅವರಿಗೆ ಕಾರಣ ನೀಡುತ್ತಾ ಹೋಗುವುದಕ್ಕೆ ಆಗುವುದಿಲ್ಲ ಎಂದು ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಅಶ್ವತ್ದನಾರಾಯಣ ಮತ್ತು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಭೇಟಿ ಬಗ್ಗೆ ಡಿ.ಕೆ. ಶಿವಕುಮಾರ್ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರನ್ನೇ ಭೇಟಿಯಾದರೂ ಅದು ನನ್ನ ಸ್ವಾತಂತ್ರ್ಯ. ನಾನು ಯಾರನ್ನು ಭೇಟಿಯಾಗಿದ್ದೇನೆ, ಯಾಕೆ ಭೇಟಿಯಾಗಿದ್ದೇನೆ ಎಂದು ಯಾರ್ಯಾರೋ ಕೇಳುವ ಪ್ರಶ್ನೆಗಳಿಗೆ ಉತ್ತರ ಹೇಳಿಕೊಂಡು ಕೂರುವುದಕ್ಕೆ ಆಗುವುದಿಲ್ಲ ಎಂದವರು ಡಿಕೆಶಿಗೆ ತಿರುಗೇಟು ನೀಡಿದರು.
ನಾನು ಯಾರನ್ನೇ ಭೇಟಿಯಾದರೂ ಅವರಿಗೇನು? ಅವರೇನು ಗೃಹ ಸಚಿವರಾ? ಎಂದು ಗರಂ ಆಗಿ ಪ್ರಶ್ನಿಸಿದರು.