ಗುವಾಹಟಿ, ಮೇ 11 (DaijiworldNews/MS): ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಅಮಿತ್ ಶಾ ಅವರನ್ನು ಪ್ರಮಾದಪೂರ್ವಕವಾಗಿ "ಪ್ರಧಾನಿ" ಎಂದು ಕರೆದಿರುವುದನ್ನು ಕಾಂಗ್ರೆಸ್ ಲೇವಡಿ ಮಾಡಿದೆ.
ಇದು ಸ್ಲಿಪ್ ಟಾಂಗ್ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡಿದರೂ ಕಾಂಗ್ರೆಸ್ ಇದನ್ನು ನಂಬಲು ನಿರಾಕರಿಸಿದೆ.
ಬೃಹತ್ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿಅಸ್ಸಾಮಿ ಭಾಷೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ "ಪ್ರಧಾನಿ ಅಮಿತ್ ಶಾ" ಮತ್ತು "ಗೃಹ ಮಂತ್ರಿ ನರೇಂದ್ರ ಮೋದಿ" ಎಂದು ನೂರಾರು ಜನರನ್ನು ಉದ್ದೇಶಿಸಿ ಮಾತನಾಡುವಾಗ ಸ್ವಾಗತಿಸಿದ್ದರು.
ಅಸ್ಸಾಂ ಕಾಂಗ್ರೆಸ್ ತನ್ನ ಅಧಿಕೃತ ಫೇಸ್ಬುಕ್ ಪುಟದಲ್ಲಿನ ಪೋಸ್ಟ್ನಲ್ಲಿ ಸಿಎಂ ಶರ್ಮಾ, ಅಮಿತ್ ಶಾ ಅವರನ್ನು "ಪ್ರಧಾನಿ" ಎಂದು ಕರೆದಿರುವುದು ಉದ್ದೇಶಪೂರ್ವಕ ಕೃತ್ಯ ಎಂದು ಉಲ್ಲೇಖಿಸಿದ್ದು, ಸರ್ಬಾನಂದ ಸೋನೋವಾಲ್ ಮುಖ್ಯಮಂತ್ರಿಯಾಗಿದ್ದಾಗ ಶರ್ಮಾ ಅವರನ್ನು "ಮುಖ್ಯಮಂತ್ರಿ" ಎಂದು ಕರೆಯುತ್ತಿದ್ದ ಅಸ್ಸಾಂ ಸಂಸದರೊಂದಿಗೆ ಹೋಲಿಕೆ ಮಾಡಿದೆ.ಆ ಸಮಯದಲ್ಲಿ ಶ್ರೀ ಶರ್ಮಾ ಅವರು ಅಸ್ಸಾಂ ಸರ್ಕಾರದಲ್ಲಿ ಸಚಿವರಾಗಿದ್ದರು.ಅಸ್ಸಾಂ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆದ್ದ ನಂತರ ಶರ್ಮಾ ಮುಖ್ಯಮಂತ್ರಿಯಾದರು.
ಸರ್ಬಾನಂದ ಸೋನೋವಾಲ್ ಅವರು ಅಸ್ಸಾಂನ ಮುಖ್ಯಮಂತ್ರಿಯಾಗಿದ್ದಾಗ, ತೇಜ್ಪುರ ಸಂಸದ ಪಲ್ಲಬ್ ಲೋಚನ್ ದಾಸ್ ಅವರು ಹಲವಾರು ಸಂದರ್ಭಗಳಲ್ಲಿ ಕ್ಯಾಬಿನೆಟ್ ಸಚಿವ ಹಿಮಂತ ಬಿಸ್ವಾ ಶರ್ಮಾ ಅವರನ್ನು ಅಸ್ಸಾಂನ ಮುಖ್ಯಮಂತ್ರಿ ಎಂದು ಸಾರ್ವಜನಿಕವಾಗಿ ಉಲ್ಲೇಖಿಸಿದ್ದರು. ಹಾಲಿ ಸಿಎಂ ದಾಸ್ ಅವರನ್ನು ಅನುಸರಿಸುತ್ತಿದ್ದಾರೆಯೇ ? ಬಿಜೆಪಿ ತನ್ನ ಮುಂದಿನ ಪ್ರಧಾನಿಯನ್ನು ನಿರ್ಧರಿಸಿದೆಯೇ? ಅಥವಾ ನರೇಂದ್ರ ಮೋದಿ ಜಿ ಬದಲಿಗೆ ಅಮಿತ್ ಶಾ ಜಿ ಅವರನ್ನು ಪ್ರಧಾನಿಯಾಗಿ ಪ್ರಚಾರ ಮಾಡಲು ಪ್ರಚಾರವನ್ನು ಪ್ರಾರಂಭಿಸಲಾಗಿದೆಯೇ? ದಾಸ್ ಅವರ ಉದಾಹರಣೆಯನ್ನು ಗಮನಿಸಿದರೆ, ಇದು ನಾಲಿಗೆಯ ಸ್ಲಿಪ್ ಆಗಿ ಕಾಣಿಸುತ್ತಿಲ್ಲವಲ್ಲವೇ? ಎಂದು ಕಾಂಗ್ರೆಸ್ ತನ್ನ ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿದೆ.