ನವದೆಹಲಿ, ಮೇ 10 (DaijiworldNews/HR): ಜುಲೈ 5ರವರೆಗೆ ಬಿಜೆಪಿ ಪಕ್ಷದ ಮುಖಂಡ ತಜೀಂದರ್ ಸಿಂಗ್ ಬಗ್ಗಾ ಅವರನ್ನು ಬಂಧಿಸದಂತೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಮೇ 6ರಂದು ದೆಹಲಿಯ ಜನಕ್ ಪುರಿ ನಿವಾಸದಿಂದ ದೆಹಲಿ ಬಿಜೆಪಿ ವಕ್ತಾರ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದರು.
ಆಮ್ ಆದ್ಮಿ ಪಕ್ಷದ ಮುಖಂಡ, ಮೊಹಾಲಿ ನಿವಾಸಿ ಸನ್ನಿ ಅಹ್ಲುವಾಲಿಯಾ ದೂರು ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ಮೇ 6ರಂದು ದೆಹಲಿಯ ಜನಕ್ ಪುರಿ ನಿವಾಸದಿಂದ ದೆಹಲಿ ಬಿಜೆಪಿ ವಕ್ತಾರ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದರು.
ದೆಹಲಿ ಪೊಲೀಸರು ಬಗ್ಗಾ ವಿರುದ್ಧ ಪ್ರಚೋದನಕಾರಿ ಹೇಳಿಕೆ, ದ್ವೇಷಕ್ಕೆ ಪ್ರೇರಣೆ ಹಾಗೂ ಕ್ರಿಮಿನಲ್ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿದ್ದರು.
ಇನ್ನು ಪಂಜಾಬ್, ಹರ್ಯಾಣ ಪೊಲೀಸರು ದೆಹಲಿಗೆ ಆಗಮಿಸಿ, ಸ್ಥಳೀಯ ಪೊಲೀಸರ ನೆರವಿನೊಂದಿಗೆ ಬಗ್ಗಾ ಅವರನ್ನು ಬಂಧಿಸಿ ಪಂಜಾಬ್ ಗೆ ಕರೆದೊಯ್ಯಲಾಗಿತ್ತು.
ಬಗ್ಗಾ ಬಂಧನ ಕುರಿತ ಅರ್ಜಿಯ ವಿಚಾರಣೆ ನಡೆಸಿದ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮುಂದಿನ ವಿಚಾರಣೆವರೆಗೆ ಬಂಧಿಸದಂತೆ ಆದೇಶ ನೀಡಿತ್ತು. ಬಳಿಕ ಮೊಹಾಲಿ ಕೋರ್ಟ್ ಬಗ್ಗಾ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ್ದು, ಪ್ರಕರಣದ ಕುರಿತು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಜುಲೈ 6ರವರೆಗೆ ಬಂಧಿಸದಂತೆ ಮಧ್ಯಂತರ ಆದೇಶ ನೀಡಿದೆ ಎಂದು ತಿಳಿದು ಬಂದಿದೆ.