ರಾಮನಗರ, ಮೇ 10 (DaijiworldNews/HR): ಬೇಲ್ ಮೇಲೆ ಹೊರ ಬಂದಿರುವ ಜೈಲು ಹಕ್ಕಿ ಮತ್ತೆ ತಿಹಾರ್ ಜೈಲು ಸೇರುವ ದಿನಗಳು ದೂರವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಶಿವಕುಮಾರ್ ನೂರು ಜನ್ಮ ಹುಟ್ಟಿ ಬಂದರೂ ನನ್ನ ಮುಖಕ್ಕೆ ಮಸಿ ಬಳಿಯಲು ಸಾಧ್ಯವಿಲ್ಲ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ನಾನು ಆ ರೇಸ್ ನಲ್ಲೂ ಇಲ್ಲ ಎಂದರು.
ಇನ್ನು ನಮ್ಮ ಪಕ್ಷದಲ್ಲಿ ಯಾರೂ ನನಗೆ ವಿರೋಧಿಗಳಿಲ್ಲ. ಇದೆಲ್ಲ ವಿರೋಧ ಪಕ್ಷಗಳ ಕುತಂತ್ರ ಅಷ್ಟೇ . ಕಾಂಗ್ರೆಸ್ ಮುಖಂಡ ಎಂ.ಬಿ. ಪಾಟೀಲ ಅವರನ್ನು ನಾನು ಭೇಟಿ ಆಗಿದ್ದೇನೆ ಎಂದು ಸುದ್ದಿ ಹರಡಿದ್ದು, ಅವರನ್ನು ಭೇಟಿಯಾಗಿಲ್ಲ. ಅದರ ಅಗತ್ಯವೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.