ನವದೆಹಲಿ, ಮೇ 10 (DaijiworldNews/MS): ತಮ್ಮ ಮಗುವೊಂದಿಗೆ ಪ್ರಯಾಣಿಸುವ ತಾಯಿಯಂದಿರಿಗೆ ರೈಲ್ವೇ ಪ್ರಯಾಣವನ್ನು ಹೆಚ್ಚು ಆರಾಮದಾಯಕವಾಗಿಸಲು ಭಾರತೀಯ ರೈಲ್ವೇಯು ಆಯ್ದ ರೈಲುಗಳಲ್ಲಿ ಮಡಚಬಹುದಾದ "ಬೇಬಿ ಬರ್ತ್" ಅನ್ನು ಪರಿಚಯಿಸಿದೆ.
ಮೇ 8 ವಿಶ್ವ ತಾಯಂದಿರ ದಿನದಂದು ಉತ್ತರ ರೈಲ್ವೆಯ ಲಕ್ನೋ ಮತ್ತು ದೆಹಲಿ ವಿಭಾಗಗಳ ಸಹಯೋಗದಲ್ಲಿ 12230 ನ AC ಮೂರು ಹಂತದ ಕೋಚ್ನಲ್ಲಿ 12 ಮತ್ತು 60 ಬೆರ್ತ್ಗಳಲ್ಲಿ ತಾಯಂದಿರಿಗೆ ಆರಾಮದಾಯಕವಾಗಿಸಲು ಅನುಕೂಲವಾಗುವಂತೆ ಪ್ರಾಯೋಗಿಕ ಆಧಾರದ ಮೇಲೆ ಪ್ರಾರಂಭಿಸಲಾಗಿದೆ.
ಉತ್ತರ ರೈಲ್ವೇ ಯು " ತಾಯಿತನ್ನ ಮಗುವಿನೊಂದಿಗೆ ಮಲಗಬಹುದಾಗಿದ್ದು, ಮಗುವಿನ ಆಸನವು ಮಡಚಬಹುದಾಗಿದ್ದು, ಕೆಳಗೆ ಬೀಳದಂತೆ ತಡೆ ಹೊಂದಿದ್ದು ಸುರಕ್ಷಿತವಾಗಿದೆ" ಎಂದು ಟ್ವೀಟ್ ಮಾಡಿದ್ದು ಮಗುವಿನ ಬರ್ತ್ನ ಕೆಲವು ಫೋಟೋಗಳನ್ನು ಸಹ ಹಂಚಿಕೊಂಡಿದೆ.
ಮಗು ಮಲಗುವಾಗ ಸೀಟಿನಿಂದ ಕೆಳಗೆ ಬೀಳದ ರೀತಿಯಲ್ಲಿ ಬೇಬಿ ಬರ್ತ್ ಅನ್ನು ಕೆಳಗಿನ ಬರ್ತ್ಗೆ ಜೋಡಿಸಲಾಗಿದೆ. ಇದು ಮಗು ಬೀಳದಂತೆ ಭದ್ರಪಡಿಸಲು ಪಟ್ಟಿಗಳನ್ನು ಹೊಂದಿದೆ.
ಬೇಬಿ ಬರ್ತ್ ಬಳಕೆಯಲ್ಲಿಲ್ಲದಿದ್ದಾಗ, ಕೆಳಗಿನ ಬರ್ತ್ನ ಕೆಳಗಿರುವ ಸ್ಟಾಪರ್ ಅದನ್ನು ಸ್ಥಳದಲ್ಲಿ ಹಿಡಿದಿಟ್ಟುಕೊಳ್ಳುತ್ತದೆ. ಇದನ್ನು ಬಳಸಲು, ಸ್ಟಾಪರ್ ಅನ್ನು ಅನ್ಲಾಕ್ ಮಾಡಿದ ನಂತರ ಕೆಳಗಿನ ಬರ್ತ್ನಂತೆಯೇ ಅದೇ ಮಟ್ಟಕ್ಕೆ ತರಲು ಬರ್ತ್ ಅನ್ನು ತಿರುಗಿಸಬೇಕಾಗುತ್ತದೆ. ಬರ್ತ್ ಸುರಕ್ಷಿತವಾಗಿದೆ ಎಂದು ಖಾತರಿಪಡಿಸಲು, ಲಾಕ್ ಮಾಡಬೇಕಾದ ಸ್ಲೈಡರ್ ಇದೆ.