ಅಸ್ಸಾಂ, ಮೇ 10 (DaijiworldNews/HR): ಮುಂಬರುವ ಜನಗಣತಿಯನ್ನು ಡಿಜಿಟೀಕರಣ ಮಾಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ಧಾರೆ.
ಈ ಕುರಿತು ಮಾತನಾಡಿದ ಅವರು, ಸರಕಾರದ ನೀತಿ ನಿರ್ಧಾರದಲ್ಲಿ ಜನಗಣತಿ ಪಾತ್ರ ಬಹಳ ಮುಖ್ಯ ಇದ್ದು, ಸೆನ್ಸಸ್ ಅನ್ನು ಆಧುನಿಕ ತಂತ್ರಜ್ಞಾನ ಮೂಲಕ ಬಹು ಆಯಾಮ, ವೈಜ್ಞಾನಿಕ ಮತ್ತು ನಿಖರವಾಗಿ ಜನಗಣತಿಯನ್ನು ಮಾಡಲಾಗುವುದು ಎಂದರು.
ಇನ್ನು ಇ-ಸೆನ್ಸಸ್ ಬಹಳ ನಿಖರವಾಗಿರಲಿದ್ದು, ಇದರ ಆಧಾರದ ಮೇಲೆ ಮುಂದಿನ 25 ವರ್ಷಗಳಲ್ಲಿ ದೇಶದ ಅಭಿವೃದ್ಧಿಯ ನಕ್ಷೆ ಮಾಡಲಾಗುವುದು ಎಂದಿದ್ದಾರೆ,
ಕೊರೊನಾದಿಂದಾಗಿ ಸೆನ್ಸಸ್ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಈಗ ಇ-ಸೆನ್ಸಸ್ ಕಾರ್ಯ ಕೈಗೊಳ್ಳುತ್ತೇವೆ. ಇದು ಬಹಳ ಕರಾರುವಾಕ್ ಆಗಿರುವ ಜನಗಣತಿಯಾಗಿರುತ್ತದೆ ಎಂದು ತಿಳಿಸಿದ್ದಾರೆ.