ಬೆಂಗಳೂರು, ಮೇ 09 (DaijiworldNews/HR): ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಒಬ್ಬ ಗುೂಂಡಾ ಆಗಿದ್ದು, ಇಂತವರ ಕೈಯಲ್ಲಿ ಕಾಂಗ್ರೆಸ್ ಪಕ್ಷ ಕೊಟ್ಟು ಸೋನಿಯಾ ಗಾಂಧಿ ನಿದ್ದೆ ಮಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಆಜಾನ್ ವಿರುದ್ಧ ಅಭಿಯಾನ ನಡೆಸಿ, ಪ್ರತಿಭಟನೆ ನಡೆಸುತ್ತಿರುವವರು ಗೂಂಡಾಗಳು. ಅವರನ್ನು ಗೂಂಡಾ ಕಾಯ್ದೆಯಲ್ಲಿ ಒದ್ದು ಒಳಗೆ ಹಾಕಬೇಕು ಎಂದು ಬಿ.ಕೆ ಹರಿಪ್ರಸಾದ್ ಹೇಳಿದ್ದು, ಆ ಬಳಿಕ ನಾನು ಆ ಮಾತೇ ಆಡಿಲ್ಲ. ಆಜಾನ್, ಕೋಮು ಸೌಹಾರ್ದ ಕದಡುವವರ ವಿರುದ್ಧ ಗೂಂಡಾ ಎಂಬುದಾಗಿ ಮಾತನಾಡಿದ್ದೆ ಎಂಬುದಾಗಿ ಸ್ಪಷ್ಟನೆ ನೀಡಿದ್ದರು.
ಇನ್ನು ಈ ಹೇಳಿದೆ ಪ್ರತಿಕ್ರಿಯಿಸಿದಂತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಕೆ ಹರಿಪ್ರಸಾದ್ ಅವರೇ ಒಬ್ಬ ಗೂಂಡಾ. ಈ ಹಿಂದೆ ಬೆಂಗಳೂರಿನಲ್ಲಿ ಗೂಂಡಾ ಆಗಿದ್ದರು. ಗೂಂಡಾಗಳ ಕೈಯಲ್ಲಿ ಕಾಂಗ್ರೆಸ್ ಪಕ್ಷ ಕೊಟ್ಟು ಸೋನಿಯಾ ಗಾಂಧಿ ಮಲಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.