ಮುಂಬೈ, ಮೇ 09 (DaijiworldNews/HR): ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತರಿಗೆ ಸೇರಿದ 20 ಕಡೆಗಳಲ್ಲಿ ಸೋಮವಾರ ಬೆಳಿಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ದಾಳಿ ನಡೆಸಿ, ಪರಿಶೀಲಿಸಲಾಗಿದೆ ಎಂದು ತಿಳಿದು ಬಂದಿದೆ.
ಶಾರ್ಪ್ ಶೂಟರ್ ಗಳು, ಮಾದಕವಸ್ತು ಕಳ್ಳಸಾಗಣೆದಾರರು, ಹವಾಲಾ ಆಪರೇಟರ್ಗಳು, ದಾವೂದ್ ಇಬ್ರಾಹಿಂನ ರಿಯಲ್ ಎಸ್ಟೇಟ್ ಮ್ಯಾನೇಜರ್ಗಳು ಮತ್ತು ಕ್ರಿಮಿನಲ್ ಸಿಂಡಿಕೇಟ್ ನ ಇತರ ಪ್ರಮುಖರ ವಿರುದ್ಧ ಬಾಂದ್ರಾ, ನಾಗ್ಪಾಡಾ, ಬೊರಿವಲಿ, ಗೋರೆಗಾಂವ್, ಪರೇಲ್, ಸಾಂತಾಕ್ರೂಜ್ನಲ್ಲಿ ದಾಳಿ ನಡೆಸಲಾಗಿದೆ.
ಇನ್ನು ಪಾಕಿಸ್ತಾನದ ಕರಾಚಿಯಿಂದ ದಾವೂದ್ ಇಬ್ರಾಹಿಂ ನಡೆಸುತ್ತಿರುವ ಭೂಗತ ಜಾಲದ ಸದಸ್ಯರು ನಡೆಸಿದ ಕ್ರಿಮಿನಲ್ ಮತ್ತು ಭಯೋತ್ಪಾದಕ ಕೃತ್ಯಗಳ ಸಂಪೂರ್ಣ ಮಾಹಿತಿಗಳನ್ನು ಎನ್ಐಎ ಮೇಲ್ವಿಚಾರಣೆ ಮಾಡಿ ತನಿಖೆ ನಡೆಸುತ್ತಿದೆ.