ಜಾರ್ಖಂಡ್, ಮೇ 09 (DaijiworldNews/HR): ವಿಶೇಷ ಸಾಮರ್ಥ್ಯವುಳ್ಳ ಮಗುವನ್ನು ರಾಂಚಿ ವಿಮಾನ ನಿಲ್ದಾಣದಲ್ಲಿ ಅವರ ಹೆತ್ತವರೊಂದಿಗೆ ರಾಂಚಿ-ಹೈದರಾಬಾದ್ ವಿಮಾನ ಹತ್ತುವುದನ್ನು ಇಂಡಿಗೋ ಏರ್ಲೈನ್ಸ್ನ ಸಿಬ್ಬಂದಿ ನಿರ್ಬಂಧಿಸಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಮಗುವನ್ನು ವಿಮಾನ ಹತ್ತಲು ಅನುಮತಿಸುವುದಿಲ್ಲ ಎಂದು ಇಂಡಿಗೋ ಸಿಬ್ಬಂದಿ ಘೋಷಿಸಿದ್ದು,ಇತರ ಪ್ರಯಾಣಿಕರಿಗೆ ಮಗು ಅಪಾಯವನ್ನುಂಟುಮಾಡಬಹುದು. ಇಂತಹ ವಿಶೇಷ ಸಾಮರ್ಥ್ಯವುಳ್ಳವರು ಮತ್ತು ಕುಡುಕ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸಲು ಅನರ್ಹರಾಗುತ್ತಾರೆ ಎಂದು ಸಿಬ್ಬಂದಿ ಹೇಳಿರುವುದಾಗಿ ಪೋಷಕರು ಆರೋಪಿಸಿದ್ದಾರೆ.
ವಿಮಾನಯಾನ ಸಂಸ್ಥೆಯು ಈ ಬಗ್ಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ, ವಿಶೇಷ ಸಾಮರ್ಥ್ಯವುಳ್ಳ ಮಗುವು ಭಯಭೀತರಾಗಿದ್ದರಿಂದ ಮೇ 07 ರಂದು ತನ್ನ ಕುಟುಂಬದೊಂದಿಗೆ ವಿಮಾನವನ್ನು ಹತ್ತಲು ಸಾಧ್ಯವಾಗಲಿಲ್ಲ. ವಿಮಾನಯಾನವು ಕುಟುಂಬಕ್ಕೆ ಹೋಟೆಲ್ ವಾಸ್ತವ್ಯವನ್ನು ಒದಗಿಸಿದ್ದು, ಅಲ್ಲಿ ಅವರು ಸುರಕ್ಷಿತವಾಗಿ ಇದ್ದಾರೆ ಎಂದು ತಿಳಿಸಿದೆ.
ಇನ್ನು ಕುಟುಂಬವು ಇಂದು ಬೆಳಿಗ್ಗೆ ಅವರ ಹೋಗಬೇಕಾದ ಸ್ಥಳಕ್ಕೆ ಸುರಕ್ಷಿತವಾಗಿ ಸೇರಿದ್ದಾರೆ ಎಂದು ವಿಮಾನಯಾನ ಸಂಸ್ಥೆಯು ತಮ್ಮ ಹೇಳಿಕೆಯಲ್ಲಿ ತಿಳಿಸಿದೆ.