ಮುಂಬೈ, ಮೇ 08 (DaijiworldNews/DB): ರಸ್ತೆ ಸ್ವಚ್ಛಗೊಳಿಸುತ್ತಿದ್ದ ವೇಳೆ ಕಸದ ತೊಟ್ಟಿಯಲ್ಲಿದ್ದ ನವಜಾತ ಶಿಶುವನ್ನು ಮುಂಬೈಯ ಸ್ವಚ್ಛತಾ ಕಾರ್ಮಿಕರೊಬ್ಬರು ರಕ್ಷಿಸಿದ್ದಾರೆ.
ಬಿಎಂಸಿ ಕ್ಲೀನರ್ ಮರೈನ್ ಡ್ರೈವ್ ನ ಎನ್.ಎಸ್. ರಸ್ತೆಯ ಡಸ್ಟ್ ಬಿನ್ನಲ್ಲಿಈ ನವಜಾತ ಶಿಶುವನ್ನು ಯಾರೋ ಇರಿಸಿ ಹೋಗಿದ್ದರು. ಶಿಶು ಕಸದ ತೊಟ್ಟಿಯಲ್ಲಿ ಇರುವುದನ್ನು ನೋಡಿದ ಕಾರ್ಮಿಕ ಮಹೇಶ್ ಜೇತ್ವಾ (40) ಅದನ್ನು ಸ್ಥಳೀಯರ ಸಹಾಯದಿಂದ ಹೊರ ತೆಗೆದಿದ್ದಾರೆ. ಬಳಿಕ ಅದಕ್ಕೆ ಪ್ರಥಮ ಚಿಕಿತ್ಸೆ ಮತ್ತು ಹಾಲು ನೀಡಿ ಮರೀನ್ ಡ್ರೈವ್ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಶಿಶುವಿನ ಅಪರಿಚಿತ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪ್ರಸ್ತುತ ಮಕ್ಕಳ ಕಲ್ಯಾಣ ಕೇಂದ್ರದಲ್ಲಿ ಈ ಶಿಶು ಚಿಕಿತ್ಸೆ ಪಡೆಯುತ್ತಿದೆ. ಮಗುವನ್ನು ಬಟ್ಟೆಯ ತುಂಡಿನಲ್ಲಿ ಸುತ್ತಿ ಇಡಲಾಗಿತ್ತು.