ಮುಂಬೈ, ಮೇ 08 (DaijiworldNews/DB): ಮುಂಬೈ ಮೂಲದ ವೈದ್ಯೆಯೋರ್ವರು ವಿಶ್ವದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಚಾರಣ ಮಾಡುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.
ಮೃತ ವೈದ್ಯೆಯನ್ನು ಗುರುಗ್ರಾಮ ನಿವಾಸಿ ಡಾ. ಪ್ರಜ್ಞಾ ಸಾಮಂತ್ (52) ಎಂದು ಗುರುತಿಸಲಾಗಿದೆ.
ನೇಪಾಳದಲ್ಲಿರುವ ವಿಶ್ವದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪಿಗೆ ಇವರು ಚಾರಣ ಕೈಗೊಂಡಿದ್ದರು. ಈ ವೇಳೆ ಪರ್ವತಾರೋಹಣ ಮಾಡುವಾಗ ಹೃದಯಾಘಾತ ಸಂಭವಿಸಿದೆ. ಪಾರ್ಥಿವ ಶರೀರವನ್ನು ಭಾನುವಾರ ತಡರಾತ್ರಿ ವಿಮಾನದ ಮೂಲಕ ಮುಂಬೈಗೆ ತರಲಾಗುತ್ತದೆ. ಮುಂಬೈನ ಶಿವಧಾಮ ಚಿತಾಗಾರದಲ್ಲಿ ಸೋಮವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.