ನವದೆಹಲಿ, ಮೇ 08 (DaijiworldNews/HR): ಗೃಹ ಬಳಕೆಯ 14.2 ಕೆಜಿ ಎಲ್ಪಿಜಿ ಸಿಲಿಂಡರ್ಗಳ ದರ ಏರಿಕೆಯಾಗಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿಲಿಂಡರ್ ದರ ಏರಿಕೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 2014ರಲ್ಲಿ ಕಾಂಗ್ರೆಸ್ ಇದ್ದಾಗ ಸಿಲಿಂಡರ್ ದರ 410 ರೂ. ಇತ್ತು. 827 ಸಬ್ಸಿಡಿ ಇತ್ತು. 2022ರಲ್ಲಿ ಬಿಜೆಪಿ ಇರುವಾಗ 999 ರೂ. ಇದೆ. ಸಬ್ಸಿಡಿ ಸೊನ್ನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು 2 ಸಿಲಿಂಡರ್ಗಳ ಬೆಲೆಗೆ ಈಗ 1 ಸಿಲಿಂಡರ್ ಸಿಗುತ್ತಿದ್ದು, ಕೇವಲ ಕಾಂಗ್ರೆಸ್ ಪಕ್ಷ ಬಡವರು ಮತ್ತು ಮಧ್ಯಮ ವರ್ಗದವರ ಹಿತ ಕಾಪಾಡಲಿದೆ ಎಂದರು.
ಗೃಹ ಬಳಕೆಯ ಸಿಲಿಂಡರ್ಗಳ ದರದಲ್ಲಿ ಶನಿವಾರ 50 ರೂ. ಹೆಚ್ಚಳ ಮಾಡಲಾಗಿದ್ದು, ಹೊಸ ದರದ ಬಳಿಕ ಗೃಹ ಬಳಕೆ ಸಿಲಿಂಡರ್ಗಳ ಬೆಲೆ 999.50 ರೂ. ಆಗಿದೆ.