ಬಾಲಸೋರ್, ಮೇ 08 (DaijiworldNews/HR): ವಿವಾಹಿತ ಮಹಿಳೆಯ ಮೇಲೆ ಆಕೆಯ ಎರಡೂವರೆ ವರ್ಷದ ಮಗನ ಮುಂದೆ 79 ದಿನಗಳ ಕಾಲ ಮಂತ್ರವಾದಿಯೊಬ್ಬ ನಿರಂತರವಾಗಿ ಅತ್ಯಾಚಾರವೆಸಗಿರುವ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಪೊಲೀಸರು ಮಹಿಳೆ ಮತ್ತು ಆಕೆಯ ಮಗುವನ್ನು ಬೀಗ ಹಾಕಿದ ಕೊಠಡಿಯಿಂದ ರಕ್ಷಿಸಿದ್ದು, ಆರೋಪಿ ತಪ್ಪಿಸಿಕೊಂಡಿದ್ದು, ಆತನನ್ನು ಹಿಡಿಯಲು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸರಿ ತಿಳಿಸಿದ್ದಾರೆ.
ಇನ್ನು ಮಹಿಳೆ ಮತ್ತು ಆಕೆಯ ಅತ್ತೆ-ಮಾವಂದಿರ ನಡುವಿನ ವೈವಾಹಿಕ ಭಿನ್ನಾಭಿಪ್ರಾಯವನ್ನು ಪರಿಹರಿಸಲು ತನ್ನ ಪತಿ ಮತ್ತು ಅತ್ತೆಯಂದಿರು ಮಂತ್ರವಾದಿಯೊಂದಿಗೆ ಇರುವಂತೆ ಒತ್ತಾಯಿಸಿದ್ದಾರೆ ಎಂದು ಮಹಿಳೆ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ.
ಮಹಿಳೆಯು 2017ರಲ್ಲಿ ವಿವಾಹವಾಗಿದ್ದು, ವರದಕ್ಷಿಣೆಗಾಗಿ ತನ್ನ ಅತ್ತೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದು, ಮಹಿಳೆ ತನ್ನೊಂದಿಗೆ ಕೆಲವು ತಿಂಗಳು ಇದ್ದರೆ ಭಿನ್ನಾಭಿಪ್ರಾಯವನ್ನು ಪರಿಹರಿಸುವುದಾಗಿ ಮಂತ್ರವಾದಿ ಕುಟುಂಬಕ್ಕೆ ಭರವಸೆ ನೀಡಿದ್ದ. ಆಕೆಯನ್ನು ಒಪ್ಪಿಸಲು ಸಾಧ್ಯವಾಗದಿದ್ದಾಗ ಅವಳ ಅತ್ತೆ ಅವಳನ್ನು ಪ್ರಜ್ಞೆ ತಪ್ಪಿಸಿದ್ದು, ಎಚ್ಚರಗೊಂಡಾಗ ಆಕೆ ಮತ್ತು ಮಗು ಮಂತ್ರವಾದಿಯ ಕೋಣೆಯಲ್ಲಿ ಇದ್ದು, ಈ ವೇಳೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.