ಜಮ್ಮು-ಕಾಶ್ಮೀರ, ಮೇ 08 (DaijiworldNews/HR): ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಇಬ್ಬರು ಉಗ್ರರನ್ನು ಬಂಧಿಸಿ, ಅವರಿಂದ ಶಸಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿರುವ ಘಟನೆ ಜಮ್ಮು-ಕಾಶ್ಮೀರದ ಬಂಡಿಪೊರಾ ಜಿಲ್ಲೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಬಂಧಿತರನ್ನು ಅಬಿದ್ ಆಲಿ ಮತ್ತು ಫೈಸಲ್ ಹಸನ್ ಪ್ಯಾರೇ ಎಂದು ಗುರುತಿಸಲಾಗಿದೆ
ಖಚಿತ ಮಾಹಿತಿ ಆಧಾರದ ಮೇಲೆ ವುಲ್ಲಾರ್ ವಾಂಟೆಜ್ ಅರಾಗಾಮ್ ಬಳಿ ಭದ್ರತಾ ಪಡೆಗಳಿಂದ ಚೆಕ್ ಪೋಸ್ಟ್ ನಿರ್ಮಿಸಲಾಗಿದ್ದು, ವಾಹನಗಳು ಮತ್ತು ಪಾದಚಾರಿಗಳನ್ನು ತಪಾಸಣೆ ಮಾಡುತ್ತಿದ್ದಾಗ ಕಾರಿನಲ್ಲಿದ್ದ ಇಬ್ಬರು ತಮ್ಮ ಗುರುತನ್ನು ಮರೆ ಮಾಚಲು ಪ್ರಯತ್ನಿಸಿದ್ದಾರೆ.
ಇನ್ನು ಈ ಇಬ್ಬರು ಶಂಕಿತರು ಚೆಕ್ ಪೋಸ್ಟ್ ಮುರಿದು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅವರನ್ನು ಬಂಧಿಸಲಾಗಿದ್ದು, ಅವರಿಂದ ಎಕೆ-47 ರೈಪಲ್ಸ್ ಸೇರಿದಂತೆ ಶಸಾಸ್ತ್ರಗಳು, ಮದ್ದುಗುಂಡುಗಳು, ಎರಡು ಮ್ಯಾಗಜಿನ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.