ಹೈದರಾಬಾದ್, ಮೇ 08 (DaijiworldNews/HR): ಕಾಂಗ್ರೆಸ್ ನಾಯಕ, ವಯನಾಡ್ ಸಂಸದ ರಾಹುಲ್ ಗಾಂಧಿ ಅವರಿಗೆ ಹೈದರಾಬಾದ್ನಿಂದ ಸ್ಪರ್ಧಿಸುವಂತೆ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸವಾಲು ಹಾಕಿದ್ದು, ನೀವು ವಯನಾಡಿನಲ್ಲೂ ಸೋಲುತ್ತೀರಿ ಎಂದಿದ್ದಾರೆ.
ಟಿಆರ್ಎಸ್, ಬಿಜೆಪಿ ಮತ್ತು ಓವೈಸಿಗೆ ಸವಾಲು ಹಾಕಲು ತೆಲಂಗಾಣಕ್ಕೆ ಬಂದಿದ್ದೇನೆ ಎಂಬ ರಾಹುಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಓವೈಸಿ, ನೀವು ಈಗ ವಯನಾಡಿನಿಂದಲೂ ಸೋಲುತ್ತೀರಿ ಎಂದು ನಾನು ಹೇಳುತ್ತಿದ್ದೇನೆ. ಹೈದರಾಬಾದ್ನಿಂದ ಸ್ಪರ್ಧಿಸಿ. ನಿಮ್ಮ ಅದೃಷ್ಟವನ್ನು ಪ್ರಯತ್ನಿಸಿ ಎಂದು ಸವಾಲಾಕಿದ್ದಾರೆ.
ಇನ್ನು ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ತೆಲಂಗಾಣದಲ್ಲಿ ಶುಕ್ರವಾರ ರಾಹುಲ್ ಗಾಂಧಿ ರೈತ ಸಂಘರ್ಷ ಸಭೆಯ ಮೂಲಕ ಪಕ್ಷದ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ.