ಪಣಜಿ, ಮೇ 07 (DaijiworldNews/DB): ಕಾಂಗ್ರೆಸ್ ಮುಕ್ತ ಭಾರತ ಬಿಜೆಪಿ ಗುರಿ. ಆದರೆ ಆ ಪಕ್ಷದ ಅಸ್ತಿತ್ವ ನಾಶ ಮಾಡುವುದಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದಿಪ್ಸಿಂಗ್ ಪುರಿ ಹೇಳಿದ್ದಾರೆ.
ಗೋವಾ ಫೆಸ್ಟ್ -2022 ರಲ್ಲಿ ಮಾತನಾಡಿದ ಅವರು, ಭಾರತಕ್ಕೆ ಸಮರ್ಥ ಪ್ರತಿಪಕ್ಷದ ಅಗತ್ಯ ತುಂಬಾ ಇದೆ. ಆದರೆ ಇದನ್ನು ಮುನ್ನಡೆಸುವವರು ಯಾರೆಂಬುದೇ ಸದ್ಯದ ಪ್ರಶ್ನೆ. ರಾಹುಲ್ ಗಾಂಧಿ, ಅರವಿಂದ ಕೇಜ್ರೀವಾಲ್, ಮಮತಾ ಬ್ಯಾನರ್ಜಿ ಅವರು ಸಮರ್ಥ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವ ಆಕಾಂಕ್ಷೆಯುಳ್ಳವರಾಗಿದ್ದಾರೆ ಎಂದರು.
ಕಳೆದ ಕೆಲ ತಿಂಗಳುಗಳಿಂದೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಜನರು ಬಿಜೆಪಿಯನ್ನು ಹರಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಜನಬೆಂಬಲ ಬಿಜೆಪಿ ಕಡೆಗಿದೆ. ಕಾಂಗ್ರೆಸ್ ಮುಕ್ತ ಭಾರತ ನಮ್ಮ ಗುರಿಯಾದರೂ, ಆ ಪಕ್ಷವನ್ನು ಕೊನೆಗಾಣಿಸುವುದಿಲ್ಲ ಎಂದವರು ತಿಳಿಸಿದರು.