ಥಾಣೆ, ಮೇ 07 (DaijiworldNews/HR): ಗ್ರಾಮಸ್ಥರನ್ನು ಕತ್ತಿ ಮತ್ತು ಕೊಡಲಿಯಂತಹ ಆಯುಧಗಳನ್ನು ಹಿಡಿದು ಭಯಭೀತಗೊಳಿಸಿದ್ದ ಆರೋಪದ ಮೇಲೆ ಮಹಿಳೆ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ದಹಿಸರ್ ಮೋರಿ ಮತ್ತು ಠಾಕೂರ್ಪಾದಲ್ಲಿ ನಡೆದಿದೆ.
ಬಂಧಿತರನ್ನು ವೇದ್ ಸಲೀಂ ಶೇಖ್, ದಿಲಾವರ್ ಫರೀದ್ ಶೇಖ್, ಸಾಹಿದ್ ನಸೀರ್ ಶೇಖ್, ಸಾದ್ ಅಹ್ಮದ್ ಮತ್ತು ಮರಿಯಾ ಜಾವೇದ್ ಖಾನ್ ಎಂದು ಗುರುತಿಸಲಾಗಿದೆ.
ಈ ಕುರಿತು ಶಿಲ್ ದೈಘರ್ ಪೊಲೀಸ್ ಠಾಣೆಯ ಅಧಿಕಾರಿ ಮಾಹಿತಿ ನೀಡಿದ್ದು, ಶುಕ್ರವಾರ ಮಧ್ಯರಾತ್ರಿ 12.15 ರಿಂದ 3.45 ರ ನಡುವೆ ಆರೋಪಿಗಳು ಕೈಯಲ್ಲಿ ಕತ್ತಿಗಳು, ಕೊಡಲಿಗಳನ್ನು ಹಿಡಿದುಕೊಂಡು ಸ್ಥಳೀಯ ನಿವಾಸಿಗಳನ್ನು ಭಯಭೀತಗೊಳಿಸಿದ್ದು, ಮನೆಗಳ ಬಾಗಿಲುಗಳನ್ನು ಬಡಿದು, ನಿವಾಸಿಗಳಿಗೆ ಬೆದರಿಕೆ ಹಾಕಿ ಜನರಲ್ಲಿ ಭೀತಿ ಉಂಟು ಮಾಡಿದ್ದರು.
ಇನ್ನು ಕೆಲವರು ಧೈರ್ಯ ಮಾಡಿ ಒಗ್ಗಟ್ಟಾಗಿ ಆರೋಪಿಗಳನ್ನು ಹಿಡಿದಿದ್ದು, ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.