ಕೋಝಿಕ್ಕೋಡ್ , ಮೇ 07 (DaijiworldNews/MS): 'ಕೇರಳ ಇಸ್ಲಾಮಿಕ್ ಭಯೋತ್ಪಾದನೆ ಸಂತಾನೋತ್ಪತ್ತಿ ಕೇಂದ್ರವಾಗಿದೆ' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆರೋಪಿಸಿದರು.
ಕೋಝಿಕ್ಕೋಡ್ನಲ್ಲಿ ಕಮಲ ಪಕ್ಷವು ಆಯೋಜಿಸಿದ್ದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇರಳ ಸರ್ಕಾರ ಇಸ್ಲಾಮಿಕ್ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದೆ. ಸಿಪಿಐ(ಎಂ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್ಡಿಎಫ್) ಸರ್ಕಾರವು ಯಾವಾಗಲೂ ಸಮಾಜದ ಪ್ರತಿಯೊಂದು ವರ್ಗವನ್ನು ಸಮಾನವಾಗಿ ಪರಿಗಣಿಸುತ್ತದೆ ಎಂಬ ತೋರ್ಪಡಿಕೆ ನಟನೆ ಮಾಡುತ್ತದೆ ಆದರೆ ಅವರಲ್ಲಿರುವುದು "ಹುಸಿ ಜಾತ್ಯತೀತತೆ" ಎಂದು ಆರೋಪಿಸಿದರು.
ಎಡಪಂಥೀಯ ಸರ್ಕಾರವು ಸಮಾಜದ ಎಲ್ಲಾ ವರ್ಗಗಳನ್ನು ಪರಿಗಣಿಸುವ ನಾಟಕ ಮಾಡಿ ನಾವು ತಟಸ್ಥರು ಎಂದು ತೋರ್ಪಡಿಸಿಕೊಳ್ಳುತ್ತಾರೆ . ಸಮಾಜದ ಒಂದು ವರ್ಗಕ್ಕೆ ವಿಶೇಷ ಸೌಲಭ್ಯಗಳನ್ನು ನೀಡಿ ಇತರ ವಿಭಾಗಗಳನ್ನು ವಿಭಜಿಸಲು ಪ್ರಯತ್ನಿಸುತ್ತಿದೆ. ಅಲ್ಲದೆ ಇಸ್ಲಾಮಿಕ್ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇಸ್ಲಾಮಿಕ್ ಭಯೋತ್ಪಾದನೆಯು ಸಿಪಿಐ(ಎಂ) ಸರ್ಕಾರದ ಪ್ರೋತ್ಸಾಹವನ್ನು ಪಡೆಯುತ್ತಿದ್ದು ಕೇರಳವು ಇಸ್ಲಾಮಿಕ್ ಸಂತಾನೋತ್ಪತ್ತಿ ಕೇಂದ್ರ ವಾಗಿದೆ ಎಂದು ಹೇಳಿದರು.
ಧಾರ್ಮಿಕ ಸಮುದಾಯಗಳು, ವಿಶೇಷವಾಗಿ ಕೇರಳದ ಕ್ರಿಶ್ಚಿಯನ್ನರು ಆತಂಕಕ್ಕೀಡಾಗಿದ್ದುಈ ಸಮುದಾಯವೂ "ಮಾದಕ ಜಿಹಾದ್" ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದೆ. ಹೀಗಾಗಿ ಕೆಲವು ವರ್ಗಗಳನ್ನು ಬೆಂಬಲಿಸುವ ಮೂಲಕ ಪಿಣರಾಯಿ ಸರ್ಕಾರವೂ ಒಡೆದು ಆಳುವ ನೀತಿಯನ್ನು ಮಾಡುತ್ತಿದೆ ಎಂದು ಆರೋಪಿದರು.