ಮೈಸೂರು, ಮೇ 07 (DaijiworldNews/MS): ಕವಲಂದೆಯನ್ನು ಚೋಟಾ ಪಾಕಿಸ್ತಾನ್ ಎಂಬ ಘೋಷಣೆ ಕೂಗಿದ ಆರೋಪಿಗಳ ಕೃತ್ಯಕ್ಕೆ ಮುಸ್ಲಿಂ ಮುಖಂಡರಿಂದ ಖಂಡನೆ ವ್ಯಕ್ತವಾಗಿದೆ.
ಕವಲಂದೆ ಭೋಲೆ ತೋ ಛೋಟಾ ಪಾಕಿಸ್ತಾನ್ ಘೋಷಣೆ ವಿಚಾರವಾಗಿ ಮಾತನಾಡಿದ ಸ್ಥಳೀಯ ಮುಸ್ಲಿಂ ಮುಖಂಡರು, ಮುಠ್ಠಾಳ ದೇಶದ ಹೆಸರನ್ನು ನಾವು ಬಳಸಿಕೊಳ್ಳುವುದಿಲ್ಲ. ಭಾರತ ನಮ್ಮ ದೇಶ, ನಾವು ಇಲ್ಲೇ ಹುಟ್ಟಿದ್ದೇವೆ, ಇಲ್ಲೇ ಬದುಕುತ್ತೇವೆ. ಕಿಡಿಗೇಡಿ ಯುವಕರನ್ನು ನಾವೇ ಹಿಡಿದುಕೊಟ್ಟಿದ್ದೇವೆ. ನಾವು ಹುಟ್ಟಿ ಬೆಳೆದ ದೇಶ ಇದು. 8-10 ತಲೆಮಾರುಗಳಿಂದ ಇಲ್ಲಿ ಬದುಕುತ್ತಿದ್ದೇವೆ. ಕಿಡಿಗೇಡಿ ಯುವಕರನ್ನ ನಾವೇ ಹಿಡಿದುಕೊಟ್ಟಿದ್ದೇವೆ. ಇದರ ಹಿಂದೆ ಯಾರ ಕುಮ್ಮಕ್ಕೂ ಇಲ್ಲ. ಆ ಮುಠ್ಠಾಳ ದೇಶದ ಹೆಸರನ್ನು ನಾವು ಯಾವುದೇ ಕಾರಣಕ್ಕೂ ಬಳಸುವುದಿಲ್ಲ. ಸಂವಿಧಾನದ ಪ್ರಕಾರ ಕಿಡಿಗೇಡಿಗಳಿಗೆ ಶಿಕ್ಷೆ ನೀಡಲಿ ಎಂದು ಹೇಳಿದ್ದಾರೆ.
ಈ ವಿಚಾರ ಆಗಲೇ ಗೊತ್ತಾಗಿದ್ದರೆ ಅಲ್ಲೇ ಆರೋಪಿಗಳಿಗೆ ಬಾರಿಸುತ್ತಿದ್ದೆವು. ಆದರೆ ನಮಗೂ ಮಾಧ್ಯಮಗಳಲ್ಲಿ ನೋಡಿ ಈ ಬಗ್ಗೆ ತಿಳಿಯಿತು. ಯುವಕರು ಮಾಡಿರುವುದು ಅಕ್ಷಮ್ಯ ಅಪರಾಧ, ನಮಗೆ ಬೇರೆ ದೇಶದ ಬಗ್ಗೆ ಚಿಂತೆ ಯಾಕೆ? ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ನೀಡಿದ್ದೇವೆ ಎಂದು ಹೇಳಿದ್ದಾರೆ.