ಮೈಸೂರು, ಮೇ 06 (DaijiworldNews/MS): ಮೈಸೂರಿನ ಕೌಲಂದೆ ಗ್ರಾಮದಲ್ಲಿ ’ಮಿನಿ ಪಾಕಿಸ್ತಾನ ’ ಎಂದು ಘೋಷಣೆ ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆ ಸಂಬಂಧ ದೊಡ್ಡಕವಲೆಂದು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, ಘಟನೆಯ ಹಿನ್ನಲೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಫಯಾಜ್ ಮತ್ತು ಫಯಾಜ್ ಅಲಿ ಖಾನ್ ಬಂಧಿತ ಆರೋಪಿಗಳು.30 ಸೆಕೆಂಡ್ ಗಳ ವಿಡಿಯೋದಲ್ಲಿ ಪಾಕಿಸ್ಥಾನ ಪರ ಘೋಷಣೆ ಕೂಗಿರುವ ಆರೋಪಿಗಳನ್ನು ನಂಜನಗೂಡು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಬ್ಬರೂ ಗ್ರಾಮದಲ್ಲೇ ಕೂಲಿ ಕೆಲಸ ಮಾಡಿಕೊಂಡಿದ್ದು. ಒಬ್ಬನ ವಿದ್ಯಾಭ್ಯಾಸ ಎಸ್ಸೆಸ್ಸೆಸ್ಸೆ ಅಪೂರ್ಣ. ಮತ್ತೊಬ್ಬ ಐಟಿಐ ಅನುತೀರ್ಣನಾಗಿದ್ದಾನೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೌಲಂದೆ ಗ್ರಾಮದಲ್ಲಿ ಮುಸ್ಲಿಮರು ರಂಜನ್ ಹಬ್ಬದ ನಮಾಜ್ ಮುಗಿಸಿ ಒಂದು ಕಡೆ ಸೇರಿದ್ದರು. ಈ ವೇಳೆ ವ್ಯಕ್ತಿಯೊಬ್ಬ ವಿಡಿಯೋ ಮಾಡಿದ್ದಾನೆ. ವಿಡಿಯೋ ಮಾಡುವ ವೇಳೆ ಕವಲಂದೆ ಬೋಲೆ ತೋ ಛೋಟಾ ಪಾಕಿಸ್ತಾನ್' ಧ್ವನಿ ಇರುವ ವೀಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿತ್ತು . ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಜ್ಮ ದೇಖೋ ಬಿ, ಹಮಾರ ಗಾವೋಂಕ ಮೇ ಬಿ ಪಾಕಿಸ್ಥಾನ ಛೋಟಾ', 'ಕವಲಂದೆ ಬೋಲೆ ತೋ ಛೋಟಾ ಪಾಕಿಸ್ತಾನ್ ಎನ್ನುವ ಧ್ವನಿ ಕೇಳಿಬಂದಿತ್ತು.
ಮೈಸೂರು ಜಿಲ್ಲೆಯ ನಂಜನಗೂಡ ತಾಲೂಕಿನ ಕೌಲಂದೆ ಗ್ರಾಮದಲ್ಲಿ ಛೋಟಾ ಪಾಕಿಸ್ತಾನ ಎಂದು ಘೋಷಣೆ ಕೂಗಿದ ವಿಡಿಯೋ ಭಾರೀ ವಿವಾದಕ್ಕೂ ಕಾರಣದ ಹಿನ್ನಲೆಯಲ್ಲಿ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ವ್ಯಕ್ತವಾಗಿ ಈ ಸಂಭಂಧ ದೊಡ್ಡ ಕವಲೆಂದು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು.