ಮುಂಬೈ, ಮೇ 05 (DaijiworldNews/HR): ಬಾಲಿವುಡ್ ನಟ ಸಲ್ಮಾನ್ ಖಾನ್ ಪತ್ರಕರ್ತನೊಬ್ಬನನ್ನು ಬೆದರಿಸಿ ಕಿರುಕುಳ ನೀಡಿದ್ದಾರೆ ಎಂಬ ದೂರಿನನ್ವಯ ಏಪ್ರಿಲ್ 5 ರಂದು ಸಲ್ಮಾನ್ ಖಾನ್ ಹಾಜರಾಗಿರಲಿಲ್ಲ ಎಂದು ಇದೀಗ ಸದ್ಯ ಸಮನ್ಸ್ ಅವಧಿಯನ್ನು ವಿಸ್ತರಿಸಲಾಗಿದೆ.
ಪತ್ರಕರ್ತನೊಬ್ಬನನ್ನು ಬೆದರಿಸಿ ಕಿರುಕುಳ ನೀಡಿದ್ದಾರೆ ಎಂಬ ದೂರು ಸದ್ಯ ಸಲ್ಮಾನ್ ಮೇಲಿದ್ದು, 2019ರಲ್ಲಿ ಈ ಘಟನೆ ನಡೆದಿತ್ತು. ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಈಗಾಗಲೇ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಏಪ್ರಿಲ್ 5 ರಂದು ಸಲ್ಮಾನ್ ಖಾನ್ ಹಾಜರಾಗಿರಲಿಲ್ಲ. ಹಾಗಾಗಿ ಸದ್ಯ ಸಮನ್ಸ್ ಅವಧಿಯನ್ನು ವಿಸ್ತರಿಸಲಾಗಿದೆ.
ಇನ್ನು ಪತ್ರಕರ್ತ ಅಶೋಕ್ ಪಾಂಡೆ ಎಂಬುವವರಿಗೆ ಸಲ್ಮಾನ್ ಖಾನ್ ಹಾಗೂ ಅವರ ಬಾಡಿಗಾರ್ಡ್ ನವಾಜ್ ಶೇಖ್ ದುರ್ವರ್ತನೆ ತೋರಿದ್ದರು ಎನ್ನಲಾಗಿದ್ದು, ಸದ್ಯ ಜೂನ್ 13ಕ್ಕೆ ಮತ್ತೆ ವಿಚಾರಣೆ ನಡೆಯಲಿದೆ.