ಆಂಧ್ರಪ್ರದೇಶ, ಮೇ 05 (DaijiworldNews/HR): ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಸಂಗಮ ಗ್ರಾಮದಲ್ಲಿ ಮಗನ ಮೃತದೇಹವನ್ನು ಸಾಗಿಸಲು ಆಂಬ್ಯುಲೆನ್ಸ್ಗಳು ನಿರಾಕರಿಸಿದ ಹಿನ್ನಲೆಯಲ್ಲಿ ಬೈಕ್ನಲ್ಲೇ ಶವವನ್ನು ಮನೆಗೆ ಸಾಗಿಸಿರುವ ಘಟನೆ ನಡೆದಿದೆ.
ಮೃತ ಬಾಲಕನನ್ನು ಶ್ರೀರಾಮ(8 ) ಎಂದು ಗುರುತಿಸಲಾಗಿದೆ.
ಶ್ರೀರಾಮ ಮತ್ತು ಆತನ ಸ್ನೇಹಿತ ಈಜಲು ಕಾಲುವೆಗೆ ತೆರಳಿದ್ದ ವೇಳೆ ಇಬ್ಬರೂ ನೀರಿನಲ್ಲಿ ಮುಳುಗಿದ್ದು, ಅದರನ್ನು ನೋಡಿದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು ಶ್ರೀರಾಮ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಇನ್ನು ಬಾಲಕನ ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ಮನೆಗೆ ಸಾಗಿಸಲು ಬಾಲಕನ ಪೋಷಕರು ಮನವಿ ಮಾಡಿದ್ದು, ಆಂಬ್ಯುಲೆನ್ಸ್ ಚಾಲಕರು ನಿಯಮಗಳು ಮತ್ತು ನಿಬಂಧನೆಗಳಲ್ಲಿ ಸಮಸ್ಯೆಗಳಿವೆ ಎಂದು ಉಲ್ಲೇಖಿಸಿ ನಿರಾಕರಿಸಿದ್ದು, ಇವರ ಸಹಾಯಕ್ಕಾಗಿ ಯಾವುದೇ ವಾಹನದವರು ಮುಂದೆ ಬರದ ಕಾರಣ ಬೈಕ್ನಲ್ಲೇ ಮೃತದೇಹವನ್ನು ಮನೆಗೆ ಸಾಗಿಸಿದ್ದಾರೆ.