ಚೆನ್ನೈ, ಮೇ 05 (DaijiworldNews/HR): ಜನ ಮೆಚ್ಚುಗೆ ಪಡದಿದ್ದ ಜೈ ಬೀಮ್ ಚಿತ್ರದಲ್ಲಿ ವನ್ನಿಯಾರ್ ಸಮುದಾಯವನ್ನು ಅವಹೇಳನ ಮಾಡಲಾಗಿದೆ ಎಂಬ ಆರೋಪ ಎದುರಿಸುತ್ತಿರುವ ನಟ ಸೂರ್ಯ ಅವರ ಪತ್ನಿ ನಟಿ ಜ್ಯೋತಿಕಾ ಹಾಗೂ ಜೈ ಬೀಮ್ ಚಿತ್ರ ನಿರ್ದೇಶಕ ಟಿಜೆ ಜ್ಞಾನವೇಲ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಚೆನ್ನೈ ನ್ಯಾಯಾಲಯವು ಪೋಲಿಸರಿಗೆ ಆದೇಶ ನೀಡಿದೆ ಎಂದು ತಿಳಿದು ಬಂದಿದೆ.
ಜೈ ಬೀಮ್ ಸಿನಿಮಾದ ವಿರುದ್ಧಆದಿವಾಸಿಯ ರುದ್ರ ವನ್ನಿಯಾರ್ ಎಂಬ ಸಮೂದಾಯವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ತಮ್ಮ ಸಮೂದಾಯದ ಜನರನ್ನು ಈ ಸಿನಿಮಾದಲ್ಲಿ ಕೀಳಾಗಿ ತೋರಿಸಲಾಗಿದ್ದು, ಸಮುದಾಯಗಳ ನಡುವೆ ಕೋಮುಗಲಭೆಯನ್ನು ಪ್ರಚೋದಿಸುವ ಉದ್ದೇಶವನ್ನು ಹೊಂದಿದೆ ಎಂದು ಆರೋಪಿದ್ದರು.
ಇನ್ನು ಚಿತ್ರ ಬಿಡುಗಡೆಯಾಗಿ ಒಂದು ತಿಂಗಳ ನಂತರ ಚೆನ್ನೈ ನಗರದ ಸೈದಾಪೇಟ್ ನ್ಯಾಯಾಲಯದಲ್ಲಿ ನಟ ಸೂರ್ಯ ಹಾಗೂ ಚಿತ್ರ ನಿರ್ದೇಶಕನ ವಿರುದ್ಧ ಅರ್ಜಿ ಸಲ್ಲಿಸಲಾಗಿದ್ದು, ಅರ್ಜಿ ಪುರಸ್ಕರಿಸಿದ್ದ ನ್ಯಾಯಾಲಯವು ನಟ ಸೂರ್ಯ, ಜ್ಯೋತಿಕಾ ಹಾಗೂ ನಿರ್ದೇಶಕನಿಗೆ ಕೋರ್ಟ್ಗೆ ಹಾಜರಾಗುವಂತೆ ಕಳೆದ ಏಪ್ರಿಲ್ 29ರಂದು ನೋಟಿಸ್ ಜಾರಿಮಾಡಿತ್ತು. ಆದರೆ ನ್ಯಾಯಾಲಯದ ವಿಚಾರಣೆಗೆ ಗೈರಾಗಿದ್ದರು.
ಇದೀಗ ಅರ್ಜಿದಾರರ ವಾದವನ್ನು ಒಪ್ಪಿಕೊಂಡಿರು ನ್ಯಾಯಾಲಯವು ನಟ ಸೂರ್ಯ,ಜ್ಯೋತಿಕಾ ಹಾಗೂ ಟಿಜೆ ಜ್ಞಾನವೇಲ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಚೆನ್ನೈ ಪೊಲೀಸರಿಗೆ ಸೂಚಿಸಿದೆ.