ಹರಿಯಾಣ ಮೇ 05(DaijiworldNews/MS): ನಾಲ್ವರು ಶಂಕಿತ ಖಲಿಸ್ತಾನಿ ಭಯೋತ್ಪಾದಕರನ್ನು ಹರಿಯಾಣದ ಟೋಲ್ ಪ್ಲಾಜಾದಲ್ಲಿ ಬಂಧಿಸಲಾಗಿದ್ದುಅವರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವರೆಲ್ಲರೂ ಮಹಾರಾಷ್ಟ್ರದ ನಾಂದೇಡ್ ಮತ್ತು ತೆಲಂಗಾಣದ ಆದಿಲಾಬಾದ್ಗೆ ಸ್ಫೋಟಕಗಳನ್ನು ತಲುಪಿಸಲು ಪ್ರಯಾಣಿಸುತ್ತಿದ್ದರು. ಬಂಧಿತರಲ್ಲಿ ಪ್ರಮುಖ ಆರೋಪಿ ಗುರ್ಪ್ರೀತ್ ಈ ಹಿಂದೆ ಜೈಲಿನಲ್ಲಿದ್ದು, ಅಲ್ಲಿ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದ ರಾಜಬೀರ್ನನ್ನು ಭೇಟಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಾಲ್ವರು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಅಥವಾ ಐಎಸ್ಐ ಜೊತೆ ಸಂಪರ್ಕ ಹೊಂದಿದ್ದು ಗುರ್ಪ್ರೀತ್ ಮತ್ತು ಇತರ ಮೂವರು ಸ್ಫೋಟಕಗಳ ಸರಕುಗಳನ್ನು ಭಾರತದಾದ್ಯಂತ ತಲುಪಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಿಳಿ ಬಣ್ಣದ ಟೊಯೊಟಾ ಇನ್ನೋವಾ ಎಸ್ಯುವಿಯಲ್ಲಿ ದೆಹಲಿಗೆ ತೆರಳುತ್ತಿದ್ದಾಗ ಕರ್ನಾಲ್ನ ಬಸ್ತಾರಾ ಟೋಲ್ ಪ್ಲಾಜಾದಲ್ಲಿ ಮುಂಜಾನೆ 4 ಗಂಟೆಗೆ ಅವರನ್ನು ಬಂಧಿಸಲಾಯಿತು. ಇತರ ಮೂವರು ಶಂಕಿತರನ್ನು ಪಂಜಾಬ್ ನಿವಾಸಿಗಳಾದ ಭೂಪಿಂದರ್, ಅಮನದೀಪ್ ಮತ್ತು ಪರ್ಮಿಂದರ್ ಎಂದು ಗುರುತಿಸಲಾಗಿದೆ.
ಇವರೆಲ್ಲರಿಗೂ ಪಾಕಿಸ್ತಾನದಲ್ಲಿ ಕುಳಿತು ಆದೇಶ ನೀಡುತ್ತಿದ್ದ ಭಯೋತ್ಪಾದಕ ಹರ್ವಿಂದರ್ ಸಿಂಗ್ ನ ಆಣತಿಯಂತೆ ಕೆಲಸ ಮಾಡುತ್ತಿದ್ದರು ಎಂದು ಶಂಕಿಸಲಾಗಿದೆ.
ಶಂಕಿತರಿಂದ ಒಂದು ದೇಶೀಯ ನಿರ್ಮಿತ ಪಿಸ್ತೂಲ್, 31 ಗುಂಡುಗಳು ಮತ್ತು ಐಇಡಿ ಇರುವ ಮೂರು ಕಬ್ಬಿಣದ ಕಂಟೈನರ್ಗಳು ₹ 1.3 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.