ಬೆಂಗಳೂರು, ಮೇ 05 (DaijiworldNews/HR): 545 ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮವನ್ನು ಇನ್ನು 15 ದಿನದಲ್ಲಿ ಗುಂಡಿ ತೋಡಿ ಮುಚ್ಚಿ ಹಾಕಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ ಕೇಸ್, ಲಾಟರಿ ಕೇಸ್ ಏನಾಯಿತು? ಯಾವ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣುವುದಿಲ್ಲ. ಅದೇ ರೀತಿ ಪಿಎಸ್ಐ ನೇಮಕಾತಿ ಪ್ರಕರಣವನ್ನು ಕೂಡ 15 ದಿನದಲ್ಲಿ ಗುಂಡಿ ತೋಡಿ ಮುಚ್ಚಿ ಹಾಕಲಾಗುತ್ತದೆ. ಸರ್ಕಾರ ಎಲ್ಲದಕ್ಕೂ ಮೌನವಾಗಿರುವುದನ್ನು ನೋಡಿದರೆ ಮೌನಂ ಸಮ್ಮತಿ ಲಕ್ಷಣಂ ಎನ್ನುವಂತಾಗಿದೆ ಎಂದರು.
ಇನ್ನು ಎರಡೂ ರಾಷ್ಟ್ರೀಯ ಪಕ್ಷಗಳ ನಡವಳಿಕೆಯನ್ನು ಜನ ನೋಡುತ್ತಿದ್ದು, ರಾಜ್ಯದಲ್ಲಿ ಉತ್ತಮ ಸರ್ಕಾರ ಬರಬೇಕೆಂದು ಜನರು ಆಪೇಕ್ಷಿಸಿದ್ದಾರೆ. ಹಾಗಾಗಿ ಪ್ರಾದೇಶಿಕ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದಿದ್ದಾರೆ.