ಹೈದರಾಬಾದ್, ಮೇ 05 (DaijiworldNews/HR): ಹೈದರಾಬಾದ್ನ ಸರೂರ್ನಗರದಲ್ಲಿ ನವದಂಪತಿ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಲಾಗಿದ್ದು, ಪತಿ ಸ್ಥಳದಲ್ಲೇ ಸಾವನ್ನಪ್ಪಿ, ಪತ್ನಿ ಗಂಭಿರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಖಾಸಗಿ ಉದ್ಯೋಗಿ ಬಿ ನಾಗರಾಜು (25) ಮತ್ತು ಗಾಯಗೊಂಡ ಮಹಿಳೆಯನ್ನು ಸೈಯದ್ ಅಶ್ರಿನ್ ಸುಲ್ತಾನಾ ಅಲಿಯಾಸ್ ಪಲ್ಲವಿ (23) ಎಂದು ಗುರುತಿಸಲಾಗಿದೆ.
ನಾಗರಾಜು ಮತ್ತು ಪಲ್ಲವಿ ಒಂದೇ ಗ್ರಾಮದವರಾಗಿದ್ದು, ಪರಸ್ಪರ ಪ್ರತಿಸುತ್ತಿದ್ದರು. ಆದರೆ ಇವರಿಬ್ಬರು ವಿಭಿನ್ನ ಧರ್ಮಕ್ಕೆ ಸೇರಿದವರಾಗಿದ್ದರಿಂದ ಕುಟುಂಬಸ್ಥರು ಇವರಿಬ್ಬರ ಸಂಬಂಧವನ್ನು ವಿರೋಧಿಸಿದ್ದರು. ಆದರೆ ಜನವರಿ 31, 2022 ರಂದು ಲಕ್ಷ್ಮಿ ನಗರದ ಆರ್ಯ ಸಮಾಜದಲ್ಲಿ ವಿವಾಹವಾಗಿ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿವಿದ್ದರು.
ಇನ್ನು ಬುಧವಾರ ರಾತ್ರಿ ದಂಪತಿಗಳು ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬರು ನಾಗರಾಜು ಅವರನ್ನು ತಡೆದು ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ನಾಗರಾಜು ಸ್ಥಳದಲ್ಲೇ ಮೃತಪಟ್ಟರೆ, ಪಲ್ಲವಿ ಗಾಯಗೊಂಡಿದ್ದಾರೆ.
ಮಾಹಿತಿ ಪಡೆದ ಸರೂರನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.