ಬೆಂಗಳೂರು, ಮೇ 05 (DaijiworldNews/HR): ಬುಧವಾರದಂದು ರಾಜ್ಯದ ಹಲವೆಡೆ ಸುರಿದ ಬಿರುಗಾ ಮಳೆಗೆ ಮೂವರು ಬಲಿಯಾಗಿದ್ದು, ಅನೇಕ ಕಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ, ಬೆಳೆ ಹಾನಿಯಾಗಿದೆ.
ಚಿತ್ರದುರ್ಗದಲ್ಲಿ ಕುರಿ ಮೇಯಿಸಲು ಹೋಗಿದ್ದ ತಾಯಿ-ಮಗ ಮಾರಕ್ಕ(40) ಮತ್ತು ವೆಂಕಟೇಶ್(17) ಸಿಡಿಲಿಗೆ ಬಲಿಯಾಗಿದ್ದಾರೆ.
ಇನ್ನು ಹುಬ್ಬಳ್ಳಿಯ ದೇಸಾಯಿ ಕ್ರಾಸ್ನ ಪಿಂಟೋ ರಸ್ತೆಯಯಲ್ಲಿ ಪ್ರಯಾಣಿಕರನ್ನ ಕರೆದೊಯ್ಯುತ್ತಿದ್ದ ಆಟೋ ಮೇಲೆ ಮರ ಬಿದ್ದು ಓರ್ವ ಮೃತಪಟ್ಟಿದ್ದು, ಅವರನ್ನು ರುಬ್ಬಿನ್ ಮೋರಿಸ್ ಪೆರೇರಾ (42) ಎಂದು ಗುರುತಿಸಲಾಗಿದೆ.
ಜೋರಾದ ಮಳೆಯೊಂದಿಗೆ ಗಾಳಿಯ ವೇಗವೂ ಹೆಚ್ಚಿದ್ದರಿಂದ ಹುಬ್ಬಳ್ಳಿ ನಗರದ ವಿವಿಧೆಡೆ 40ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, 30ಕ್ಕೂಅಧಿಕ ವಾಹನ ಜಖಂಗೊಂಡಿವೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಪುತ್ತೂರು, ಸುಳ್ಯ, ಕಡಬ ತಾಲೂಕುಗಳಲ್ಲಿ ಭಾರಿ ಗಾಳಿ ಸಹಿತ ಮಳೆಯಾಗಿದ್ದು, ಮರ ಬಿದ್ದು ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ಹಲವು ಮನೆಗಳಿಗೂ ಹಾನಿಯಾಗಿದೆ.