ನವದೆಹಲಿ, ಮೇ 04 (DaijiworldNews/SM): ಹೈಕೋರ್ಟ್ ಗಳಲ್ಲಿ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಸುಪ್ರೀಂ ಆತಂಕ ವ್ಯಕ್ತಪಡಿಸಿದೆ. ಹಾಗೂ ಈ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ವರದಿ ಕೇಳಿದೆ.
ಉತ್ತರ ಪ್ರದೇಶ, ರಾಜಸ್ಥಾನ್, ಮಧ್ಯಪ್ರದೇಶ, ಬಿಹಾರ, ಬಾಂಬೆ, ಒಡಿಶಾ ಹೈಕೋರ್ಟ್ ಗಳಿಂದ ನ್ಯಾ.ಎಲ್ ನಾಗೇಶ್ವರ್ ರಾವ್ ಹಾಗೂ ಬಿಆರ್ ಗವಾಯಿ ಅವರಿದ್ದ ಪೀಠ ವರದಿ ಕೇಳಿದೆ.
ಬಾಕಿ ಇರುವ ಮೇಲ್ಮನವಿ ಅರ್ಜಿಗಳು, ಆರ್ಟಿಕಲ್ 21ರ ಅಡಿಯಲ್ಲಿ ತ್ವರಿತ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆಎಂ ನಟರಾಜ್ ಅವರಿಗೆ ಈ ವಿಷಯವಾಗಿ ಸಹಕರಿಸಲು ಸೂಚಿಸಿದೆ.