ಖುಂಟಿ, ಮೇ 04 (DaijiworldNews/HR): ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದು ನಕ್ಸಲೀಯನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಜಾರ್ಖಂಡ್ನ ಖುಂಟಿ ಜಿಲ್ಲೆಯಲ್ಲಿ ನಡೆದಿದೆ.
ಹತ್ಯೆಯಾಗಿರುವ ನಕ್ಸಲೀಯನನ್ನು ಲಕಾ ಪಹಾನ್ ಎಂದು ಗುರುತಿಸಲಾಗಿದ್ದು,ಆತನ ವಿರುದ್ಧ 40 ಪ್ರಕರಣಗಳು ದಾಖಲಾಗಿವೆ.
ಇನ್ನು ನಿಷೇಧಿತ ಸಂಘಟನೆ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾದ ದಕ್ಷಿಣ ಛೋಟಾನಾಗ್ಪುರ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಲಕಾ ಪಹಾನ್ ಅವರನ್ನು ಮುರ್ಹು ಪೊಲೀಸ್ ಠಾಣೆ ವ್ಯಾಪ್ತಿಯ ಕೋಟಾ ಇಂಡಿಪಿಡಿ ಅರಣ್ಯದಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.